ನೀವು ಜೈಶ್ರೀರಾಮ್‌ ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಗಾ ಟೀಕೆ

Public TV
2 Min Read

ಭೋಪಾಲ್:‌ ನೀವು ಜೈಶ್ರೀರಾಮ್‌ ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಬಯಸುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಟೀಕಿಸಿದ್ದಾರೆ.

ಜೈ ಶ್ರೀರಾಮ್ ಕೂಗಿದ ಬಿಜೆಪಿ ಕಾರ್ಯಕರ್ತರು: ಇಂದು ಮಧ್ಯಪ್ರದೇಶದ (Madhya Pradesh) ಸಾರಂಗ್‌ಪುರದಿಂದ ಪುನರಾರಂಭಗೊಂಡ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ (Bharat Jodo Nyay Yatre) ಮಾತನಾಡುತ್ತಾ, ದೇಶದಲ್ಲಿ ನಿರುದ್ಯೋಗದ ಬಗ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ರಾಹುಲ್‌ ಗಾಂಧಿಯನ್ನು ಬಿಜೆಪಿ ಕಾರ್ಯಕರ್ತರು ಮೋದಿ.. ಮೋದಿ.. ಮತ್ತು ಜೈ ಶ್ರೀರಾಮ್ (Jai Shree Ram) ಘೋಷಣೆಗಳನ್ನು ಕೂಗುವ ಮೂಲಕ ಸ್ವಾಗತಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕನಿಗೆ ಆಲೂಗೆಡ್ಡೆಯನ್ನು ನೀಡಿ, ಬದಲಾಗಿ ಚಿನ್ನ ನೀಡುವಂತೆ ಕೇಳಿಕೊಂಡ ಪ್ರಸಂಗವೂ ನಡೆಯಿತು.

ಬಿಜೆಪಿ ಕಾರ್ಯಕರ್ತರ ಘೋಷಣೆಗಳನ್ನು ಸ್ವಾಗತಿಸಿದ ರಾಹುಲ್ (Rahul Gandhi), ನಿರುದ್ಯೋಗದ ವಿರುದ್ಧ ಪ್ರಧಾನಿಯನ್ನು ಟೀಕಿಸಿದರು. ಯುವ ನಿರುದ್ಯೋಗಿಗಳು ಸೋಶಿಯಲ್‌ ಮೀಡಿಯಾದಲ್ಲಿ ದಿನವಿಡೀ ರೀಲ್‌ಗಳನ್ನು ನೋಡುತ್ತಿರುತ್ತಾರೆ ಎಂದು ಹೇಳಿದರು. ನೀವು ದಿನವಿಡೀ ನಿಮ್ಮ ಫೋನ್‌ಗಳನ್ನು ನೋಡಬೇಕು, ಜೈ ಶ್ರೀ ರಾಮ್ ಎಂದು ಜಪಿಸಬೇಕು. ಜೊತೆಗೆ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

ಇದೇ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆ ಕುರಿತು ಪ್ರತಿಕ್ರಿಯಿಸಿ, ಹಿಂದೆ ಸಶಸ್ತ್ರ ಪಡೆಗಳು ಯುವಕರಿಗೆ ಒಂದೆರಡು ಗ್ಯಾರಂಟಿಗಳನ್ನು ನೀಡುತ್ತಿದ್ದವು. ಮೊದಲನೆಯದಾಗಿ ಯುವಕರಿಗೆ ಪಿಂಚಣಿ ಹಾಗೂ ಎರಡನೆಯದಾಗಿ ಒಂದು ವೇಳೆ ಪ್ರಾಣ ಕಳೆದುಕೊಂಡರೂ ಗೌರವ ಸಿಗುತ್ತಿತ್ತು. ಆದರೆ ಈಗ ಅಗ್ನಿವೀರ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ನಾಲ್ಕು ಜನರನ್ನು ಸೇರ್ಪಡೆಗೊಳಿಸಲಾಗುವುದು. ಈ ನಾಲ್ವರಲ್ಲಿ ಮೂವರು ರಿಲೀವ್ ಆಗುತ್ತಾರೆ. ಈ ಮೂರು ಜನರು SC, ST ಮತ್ತು OBC ಆಗಿರುತ್ತಾರೆ ಎಂದು ಅವರು ಹೇಳಿದರು.

ಮೂರು ದಿನಗಳಲ್ಲಿ ಇದು ಎರಡನೇ ಬಾರಿಗೆ ರಾಹುಲ್ ಗಾಂಧಿ ನಿರುದ್ಯೋಗದ ಬಗ್ಗೆ ಪ್ರಧಾನಿಯನ್ನು ಟೀಕಿಸಿದ್ದಾರೆ. ಭಾನುವಾರ ಗ್ವಾಲಿಯರ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಗಾ, ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ದುಪ್ಪಟ್ಟು ಇದೆ. ದೇಶದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಬಾಂಗ್ಲಾದೇಶ ಮತ್ತು ಭೂತಾನ್‌ಗಿಂತಲೂ ಜಾಸ್ತಿ ಇದೆ. ಭಾರತದ ನಿರುದ್ಯೋಗವು ಕಳೆದ 40 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ಅವರು ಹೇಳಿದರು.

Share This Article