1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಳಂದಾ ವಿವಿ ನೂತನ ಕ್ಯಾಂಪಸ್ – ಮೋದಿಯಿಂದ ಲೋಕಾರ್ಪಣೆ

Public TV
2 Min Read

– ನಳಂದಾ ವಿವಿ ನೂತನ ಕ್ಯಾಂಪಸ್‌ನಲ್ಲಿ ಹತ್ತು ಹಲವು ವಿಶೇಷ

ಪಾಟ್ನಾ: ಬಿಹಾರದ ರಾಜ್‌ಗಿರ್‌ನಲ್ಲಿ (Bihar Rajgir) 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar), ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಬ್ರೂನೈ, ದರುಸ್ಸಲಾಮ್, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಲಾವೋಸ್, ಮಾರಿಷಸ್, ಮ್ಯಾನ್ಮಾರ್, ನ್ಯೂಜಿಲೆಂಡ್, ಪೋರ್ಚುಗಲ್, ಸಿಂಗಾಪುರ, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸೇರಿದಂತೆ ಒಟ್ಟು 17 ದೇಶಗಳ ವಿದೇಶಿ ರಾಯಭಾರಿಗಳೂ ಪಾಲ್ಗೊಂಡಿದ್ದರು.

ಕ್ಯಾಂಪಸ್‌ ವಿಶೇಷತೆ ಏನು?
ನೂತನ ಕ್ಯಾಂಪಸ್‌ (Nalanda University New Campus) ಅನ್ನು ಎರಡು ಶೈಕ್ಷಣಿಕ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಒಟ್ಟು 40 ಕೊಠಡಿಗಳನ್ನ ಒಳಗೊಂಡಿದ್ದು, ಒಟ್ಟು 1900 ಆಸನ ಸಾಮರ್ಥ್ಯವಿದೆ. ಜೊತೆಗೆ ಎರಡೂ ಸಭಾಂಗಣಗಳನ್ನು ಕ್ಯಾಂಪಸ್‌ ಒಳಗೊಂಡಿದ್ದು, ಪ್ರತಿಯೊಂದೂ ಸಭಾಂಗಣ 300 ಆಸನ ಸಾಮರ್ಥ್ಯ ಹೊಂದಿದೆ. ಜೊತೆಗೆ 550 ಸಾಮರ್ಥ್ಯಗಳ ವಿದ್ಯಾರ್ಥಿನಿಲಯ, 2000 ಜನ ಕುಳಿತುಕೊಳ್ಳಬಹುದಾದ ವಿಶಾಲ ಸಭಾಂಗಣ, ಫ್ಯಾಕಲ್ಟಿ ಕ್ಲಬ್ (ಅಧ್ಯಾಪಕರ ಸಭಾಂಗಣ), ಕ್ರೀಡಾ ಸಂಕೀರ್ಣ ಹಾಗೂ ಅಂತಾರಾಷ್ಟ್ರೀಯ ಕೇಂದ್ರಗಳನ್ನು ಒಳಗೊಂಡಿದೆ.

ನಳಂದಾ ಭಾರತದ ಹೆಗ್ಗುರುತು ಗುರುತು:
ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳಲ್ಲಿ ನಳಂದಾಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಇಂದು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ದಿನ. ಏಕೆಂದರೆ ನಳಂದಾ ವಿಶ್ವವಿದ್ಯಾನಿಲಯದ ಉದ್ಘಾಟನೆಯೊಂದಿಗೆ ಬಿಹಾರವು ತನ್ನ ಕಳೆದುಹೋದ ಪರಂಪರೆಯನ್ನು ಮರಳಿ ಪಡೆದಿದೆ. ಅಲ್ಲದೇ ನಳಂದಾ ಭಾರತದ ಹೆಗ್ಗುರುತು, ಗೌರವ, ಮೌಲ್ಯ ಮತ್ತು ಮಂತ್ರವನ್ನು ಒಳಗೊಂಡಿದೆ ಎಂದು ನುಡಿದರು. ಅಲ್ಲದೇ ನಳಂದಾ ವಿವಿಯ ಪರಂಪರೆಯನ್ನು ಕೊಂಡಾಡಿದರು.

Share This Article