ಬೆಂಗಳೂರು: ಸಿ.ಜೆ ರಾಯ್ (C.J Roy) ದುರಂತ ಅಂತ್ಯ ಬೆನ್ನಲ್ಲೇ ಐಟಿ ದಾಳಿಗಳ (IT Raid) ವಿರುದ್ಧ ಉದ್ಯಮಿ ಮೋಹನ್ ದಾಸ್ ಪೈ ಅವರು ಕಟುವಾಗಿ ಟೀಕಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Minister @nsitharaman please have a Full Open Transparent Inquiry on this. We lost Siddarth founder of Coffee day to reported tax terrorism. Too many people are terrified by tax officials- an assault on citizen rights-No way to govern our country. PM @narendramodi Sir, please… https://t.co/ILlqDWEUgg
— Mohandas Pai (@TVMohandasPai) January 31, 2026
ದಯವಿಟ್ಟು ಸಿಜೆ ರಾಯ್ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡಿ. ಈಗಾಗಲೇ ನಾವು ಟ್ಯಾಕ್ಸ್ ಟೆರರಿಸಂನಿಂದ ಸಿದ್ಧಾರ್ಥ್ ಅವರನ್ನು ಕಳೆದುಕೊಂಡಿದ್ದೇವೆ. ಐಟಿ ಅಧಿಕಾರಿಗಳ ಟಾರ್ಚರ್‌ನಿಂದ ಅನೇಕರು ಸಮಸ್ಯೆಗೆ ಒಳಗಾಗಿದ್ದಾರೆ. ಈ ದಾಳಿ ಪ್ರಕ್ರಿಯೆಯೇ ಕ್ರೂರವಾಗಿದೆ. ನಿರ್ಮಲಾ ಸೀತಾರಾಮನ್ ಅವರೇ ಅಧಿಕಾರಿಗಳಿಗೆ ಹೆಚ್ಚು ಹೆಚ್ಚು ಅಧಿಕಾರ ನೀಡಿದ್ದೀರಾ, ಜನಸಾಮಾನ್ಯರನ್ನು ರಕ್ಷಿಸೋರು ಯಾರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ತನಿಖೆಗೆ ಎಸ್‌ಐಟಿ ರಚನೆ
ತಪ್ಪಾಗಿ ರೇಡ್ ಮಾಡಿದಾಗ ಅಧಿಕಾರಿಗಳಿಗೆ ಶಿಕ್ಷೆ ನೀಡಿದ್ದೀರಾ? ಖಂಡಿತಾ ಇಲ್ಲ. ಇದರಿಂದ ದಯವಿಟ್ಟು ಜನರನ್ನು ತಪ್ಪಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendramodi) ಮನವಿ ಮಾಡಿದ್ದಾರೆ.
ಕಳೆದ ಮೂರು ವರ್ಷದಲ್ಲಿ 72 ಲಕ್ಷ ಕೋಟಿ ರೂ. ನೇರ ತೆರಿಗೆಯಿಂದ ಸಂಗ್ರಹಿಸಿದ್ದೀರಿ. ಇದು ದಾಖಲೆಯ ತೆರಿಗೆ ಸಂಗ್ರಹ. ಜೊತೆಗೆ ಡಿಜಿಟಲ್ ಕ್ರಾಂತಿ ಕೂಡ ಹೌದು. ಹಾಗಿದ್ರೆ ಈ ರೀತಿಯ ದಾಳಿಗಳಿಂದ ಎಷ್ಟು ದುಡ್ಡು ಸಂಗ್ರಹಿಸಿದ್ದೀರಾ? ಎಷ್ಟು ಲಿಟಿಗೇಷನ್ ಕೇಸ್‌ಗಳಿವೆ? ಎಷ್ಟು ಕೋರ್ಟ್‌ನಲ್ಲಿ ಪ್ರಕರಣ ಇದೆ? ದಯವಿಟ್ಟು ವಿವರ ಕೊಡಿ. ಟ್ಯಾಕ್ಸ್ ಕಟ್ಟುವವರನ್ನು ರಕ್ಷಣೆ ಮಾಡಿ ಎಂದು ಪೋಸ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉದ್ಯಮಿ ಸಿಜೆ ರಾಯ್ ಪ್ರಕರಣ ತನಿಖೆ ಚುರುಕು – ಕುಟುಂಬಸ್ಥರ ವಿಚಾರಣೆ, ಹೇಳಿಕೆ ದಾಖಲು

