ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ವರ್ಚುಯಲ್ ಆಗಿ ಪಶ್ಚಿಮ ಬಂಗಾಳದ (West Bengal) ನಾಡಿಯಾದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೋದಿಯವರು ದೆಹಲಿಯಿಂದ (Delhi) ಕೋಲ್ಕತ್ತಾಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ (Helicopter) ಮೂಲಕ ತಾಹೆರ್‌ಪುರ ಹೆಲಿಪ್ಯಾಡ್‌ನಲ್ಲಿ ಮಧ್ಯಾಹ್ನ ಇಳಿಯಬೇಕಿತ್ತು. ಆದರೆ ದಟ್ಟವಾದ ಮಂಜಿನಿಂದಾಗಿ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸಾಧ್ಯವಾಗದೇ ಕೋಲ್ಕತ್ತಾಕ್ಕೆ ಮರಳಿತು.
ಹೆಲಿಕಾಪ್ಟರ್ ಲ್ಯಾಂಡ್ ಆಗುವ ಮುನ್ನ ಅಗಸದಲ್ಲಿ ಹಲವು ಸುತ್ತು ಹಾಕಿತು. ಕೊನೆಗೆ ಲ್ಯಾಂಡ್ ಮಾಡುವುದು ಅಸಾಧ್ಯ ಎನ್ನುವುದು ಪೈಲಟ್‌ಗೆ ತಿಳಿಯುತ್ತಿದ್ದಂತೆ ಕೋಲ್ಕತ್ತಾ ಕಡೆಗೆ ಹೆಲಿಕಾಪ್ಟರ್ ತಿರುಗಿತು.
Ranaghat, West Bengal: PM Narendra Modi says, “…I apologize for not being able to be present among you due to bad weather. Because of the fog, the helicopter could not land, so I am addressing you over the telephone” pic.twitter.com/B5FyT9f4Kw
— IANS (@ians_india) December 20, 2025
ವರ್ಚುಯಲ್ ಭಾಷಣದ ಆರಂಭದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಲು ಸಾಧ್ಯವಾಗದ್ದಕ್ಕೆ ಕ್ಷಮೆಯಾಚಿಸಿದರು. ಇದನ್ನೂ ಓದಿ: ಓಮನ್ ಭೇಟಿ ವೇಳೆ ಪ್ರಧಾನಿ ಕಿವಿಯಲ್ಲಿ ಆಭರಣ – ಮೋದಿ ಹೊಸ ಸ್ಟೈಲ್ ಬಗ್ಗೆ ಭಾರೀ ಚರ್ಚೆ, ಏನಿದು?
ತೃಣಮೂಲ ಕಾಂಗ್ರೆಸ್ ನನ್ನನ್ನು ಮತ್ತು ಬಿಜೆಪಿಯನ್ನು ಎಷ್ಟು ಬೇಕಾದರೂ ವಿರೋಧಿಸಲಿ, ಆದರೆ ಬಂಗಾಳದ ಪ್ರಗತಿಯನ್ನು ನಿಲ್ಲಿಸಬಾರದು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಓಲೈಕೆಯಿಂದಾಗಿ ರಾಜ್ಯದಲ್ಲಿ ಆಡಳಿತ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು.

