ದೇಶದಾದ್ಯಂತ ಬಕ್ರೀದ್ ಹಬ್ಬ ಆಚರಣೆ – ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಪ್ರಧಾನಿ

Public TV
2 Min Read

ನವದೆಹಲಿ: ದೇಶಾದ್ಯಂತ ಪವಿತ್ರ ಬಕ್ರೀದ್‌ ಹಬ್ಬದ (Bakrid Festival) ಆಚರಣೆ ಹಿನ್ನೆಲೆಯಲ್ಲಿ ಸಮಸ್ತ ಮುಸ್ಲಿಂ (Muslims) ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭಾಶಯ ಕೋರಿದ್ದಾರೆ.

ಟ್ವೀಟ್‌ ಮೂಲಕ ಶುಭ ಕೋರಿರುವ ಪ್ರಧಾನಿ ಮೋದಿ, ಸರ್ವರಿಗೂ ಬಕ್ರೀದ್ ಹಬ್ಬದ (ಈದ್-ಉಲ್-ಅಧಾ) ಶುಭಾಶಯಗಳು. ಈ ದಿನ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನ ನೀಡಲಿ, ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಎತ್ತಿ ಹಿಡಿಯುವಂತಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರೆಲ್ಲ ಐಸಿಸ್‍ ಆಗಲ್ಲ, ಮುಸ್ಲಿಂ ಮದುವೆ ಆಗಿದ್ದೇ ತಪ್ಪಾ?: ಪ್ರಿಯಾಮಣಿ ಮನದಾಳ

ಈ ವರ್ಷ ಪವಿತ್ರ ಬಕ್ರೀದ್ ಹಬ್ಬವನ್ನು ಜೂನ್ ತಿಂಗಳ ಕೊನೆಯಲ್ಲಿ ಆಚರಿಸಲಾಗುತ್ತಿದೆ. ಇಸ್ಲಾಂ ಧರ್ಮವನ್ನು ನಂಬುವ ಜನರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸುತ್ತಾರೆ. ಇದನ್ನೂ ಓದಿ: ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿದ್ದ ಖ್ಯಾತ ಗಾಯಕಿ ಮಡೋನಾ ಆರೋಗ್ಯದಲ್ಲಿ ಚೇತರಿಕೆ

ಈ ದಿನ, ಈದ್ಗಾಗಳಲ್ಲಿ (Eidgah) ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಜ್‌ ಅರ್ಪಿಸುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ. ಈ ಸಂತೋಷದ ಸಂದರ್ಭಗಳಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಇಸ್ಲಾಂನಲ್ಲಿ ಹೇಳಲಾಗಿದೆ ಎಂದು ಧರ್ಮಗುರುಗಳು ಹೇಳುತ್ತಾರೆ.

ಬಕ್ರೀದ್‌ ಹಬ್ಬದ ದಿನದಂದು ಯಾವ ಪ್ರಾಣಿಯನ್ನೂ ತ್ಯಾಗ ಮಾಡಿದರೂ, ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡುತ್ತಾರೆ. ಈ 3 ಭಾಗಗಳಲ್ಲಿ ಒಂದು ಭಾಗವನ್ನ ಬಡವರಿಗೆ, 2ನೇ ಭಾಗವನ್ನ ಸಂಬಂಧಿಕರಿಗೆ ದಾನ ಮಾಡಬೇಕು. 3ನೇ ಭಾಗವನ್ನ ಮನೆಯವರು ಬಳಸಬೇಕು ಎನ್ನುವ ಸಂಪ್ರದಾಯವಿದೆ. ಬಕ್ರೀದ್‌ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದ್ದು, ಇದು ಇಬ್ರಾಹಿಂನ ತ್ಯಾಗವನ್ನು ನೆನೆಯುವ ದಿನವಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್