ಮಾ.25 ರಂದು ಮೋದಿ ಬೆಂಗಳೂರಿಗೆ – ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ

Public TV
1 Min Read

ಬೆಂಗಳೂರು: ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರು ಪ್ರವಾಸದಲ್ಲಿದ್ದು, ವೈಟ್ ಫೀಲ್ಡ್ – ಕೆ.ಆರ್.ಪುರಂ ನಡುವಿನ ವೈಟ್‌ಫೀಲ್ಡ್‌ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ (Whitefield Metro Station) ಚಾಲನೆ ನೀಡಲಿದ್ದಾರೆ. ಆದ್ದರಿಂದ ವೈಟ್‌ಫೀಲ್ಡ್‌ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನ ಸಂಪೂರ್ಣ ನಿರ್ಬಂಧಿಸಲಾಗಿದೆ.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30ರ ವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ವೈಟ್ ಫೀಲ್ಡ್ ಸುತ್ತಮುತ್ತ ಸಂಚರಿಸುವವರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಎಲ್ಲೆಲ್ಲಿ ನಿರ್ಬಂಧ?
ವರ್ತೂರು ಕೋಡಿಯಿಂದ ಹೋಫ್ ಫಾರಂ ಜಂಕ್ಷನ್ ಮೂಲಕ ಕನ್ನಮಂಗಲ ಗೇಟ್ ವರೆಗೆ, ಚನ್ನಸಂದ್ರದಿಂದ ಹೋಫ್ ಫಾರಂ ಮೂಲಕ ಹೂಡಿ ಸರ್ಕಲ್ ವರೆಗೆ ಹಾಗೂ ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಅಸ್ಪತ್ರೆ ಮೂಲಕ ಹೋಫ್ ಫಾರಂ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಒಳಮೀಸಲಾತಿ ಹಂಚಿಕೆ; ಪ್ರತ್ಯೇಕ ಮೀಸಲಾತಿ ರದ್ದು – EWS ಕೋಟಾ ವ್ಯಾಪ್ತಿಗೆ ಮುಸ್ಲಿಮರು

ಎಲ್ಲೆಲ್ಲಿ ಪರ್ಯಾಯ ಮಾರ್ಗ?
ಏರ್‌ಪೋರ್ಟ್‌ ರಸ್ತೆಗೆ ಹೋಗುವವರು ವರ್ತೂರು ಕೋಡಿಯಿಂದ ಕುಂದಲಹಳ್ಳಿ ಬ್ರಿಡ್ಜ್ ಮೂಲಕ ಹಳೇ ಏರ್‌ಪೋರ್ಟ್‌ ರಸ್ತೆ ತಲುಪಬಹುದಾಗಿದೆ. ವರ್ತೂರು ಕೋಟಿ ತಲುಪುವವರು ಚನ್ನಸಂದ್ರ ವೃತ್ತದಿಂದ ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ ಹಗದೂರು ಮೂಲಕ ತಲುಪಬಹುದು. ಚನ್ನಸಂದ್ರ ತಲುಪುವವರು ಕಾಟಂನಲ್ಲೂರು ಕ್ರಾಸ್ ನಿಂದ ಶೀಗೆಹಳ್ಳಿ ಗೇಟ್, ಕಾಡುಗೋಡಿ ನಾಲಾರಸ್ತೆ ಮೂಲಕ ತಲುಪಬಹುದು.

ಅಲ್ಲದೇ ಕುಂದಲಹಳ್ಳಿಗೆ ಹೋಗಬೇಕಾದವರು ಹೂಡಿ ಸರ್ಕಲ್ ನಿಂದ ಗ್ರಾಫೈಟ್ ರಸ್ತೆ ಮೂಲಕ ತಲುಪಬಹುದು. ಕಾಟಂನಲ್ಲೂರು ಕ್ರಾಸ್‌ಗೆ ಹೋಗುವವರು ಹೂಡಿ ಸರ್ಕಲ್ ನಿಂದ ಅಯ್ಯಪ್ಪನಗರ, ಭಟ್ಟರಹಳ್ಳಿ-ಮೇಡಹಳ್ಳಿ ಮೂಲಕ ಕಾಟಂನಲ್ಲೂರು ಕ್ರಾಸ್ ತಲುಪಬಹುದಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ವಿಚಾರ ತಿಳಿದು ಹೈಕೋರ್ಟ್‍ಗೆ ಓಲೆಕಾರ್ ಅರ್ಜಿ

ಪ್ರಧಾನಿ ನರೇಂದ್ರ ಮೋದಿ ಆಗಮನದ ಸಮಯದಲ್ಲಿ ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಲು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *