ಅನಾವರಣಗೊಳ್ಳಲಿದೆ ಬರೋಬ್ಬರಿ 800 ಕೆ.ಜಿ ತೂಕದ ಬೃಹತ್ ಭಗವದ್ಗೀತೆ ಗ್ರಂಥ

Public TV
1 Min Read

ನವದೆಹಲಿ: ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 800 ಕೆ.ಜಿ ತೂಕದ, 670 ಪುಟಗಳನ್ನು ಹೊಂದಿರುವ ಹಿಂದೂಗಳ ಪವಿತ್ರ ಗಂಥವಾದ ಭಗವದ್ಗೀತೆಯನ್ನು ದೆಹಲಿಯ ಇಸ್ಕಾನ್ ದೇವಾಲಯದ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ.

ದೆಹಲಿಯ ಪೂರ್ವ ಕೈಲಾಸ್ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಬೃಹತ್ ಭಗವದ್ಗೀತೆ ಗ್ರಂಥವನ್ನು ಅನಾವರಣ ಮಾಡಲಿದ್ದಾರೆ. ಈ ಬೃಹತ್ ಭಗವದ್ಗೀತೆಯೂ 670 ಪುಟಗಳನ್ನು ಹೊಂದಿದ್ದು, 2.8 ಮೀಟರ್ ಎತ್ತರ ಮತ್ತು 2 ಮೀಟರ್ ಉದ್ದವಿದೆ. ಆದರಿಂದ ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಹೆಗ್ಗಳಿಕೆ ಪಡೆಯಲಿದೆ.

ವಿಶ್ವದೆಲ್ಲೆಡೆ ಸುಮಾರು 400 ಕ್ಕೂ ಹೆಚ್ಚು ಕೃಷ್ಣ ದೇಗುಲ ಹಾಗೂ 100ಕ್ಕೂ ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್ ಗಳನ್ನು ಇಸ್ಕಾನ್ ಸಂಸ್ಥೆ ನಡೆಸುತ್ತಿದೆ. ವಿಶೇಷವಾಗಿ ಈ ಭಗವದ್ಗೀತೆಯ ಕಾಗದವು ವಾಟರ್ ಪ್ರೂಫ್ ಆಗಿದ್ದು, ಈ ಪವಿತ್ರ ಗ್ರಂಥವು 18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲದೆ ಯೂಪೊ ಸಿಂಥೆಟಿಕ್ ಲೇಪಿತ ಮಿಲನ್ ಬಳಸಿ ಇಟಲಿಯ ಮಿಲಾನ್‍ನಲ್ಲಿ ಗ್ರಂಥವನ್ನು ಮುದ್ರಿಸಲಾಗಿದೆ ಎಂದು ಇಸ್ಕಾನ್ ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *