– ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ
ನವದೆಹಲಿ: ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ನಿಯೋಗ ನಡೆಸಿದ ಮೊದಲ ಸಂಸದೀಯ ಸಭೆಯಲ್ಲಿ (NDA Meeting) ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಸನ್ಮಾನಿಸಲಾಯಿತು.
ಸಂಸತ್ ಭವನದಲ್ಲಿ ಇಂದು ನಡೆದ ಸಂಸದೀಯ ಸಭೆಯಲ್ಲಿ, ಆಪರೇಷನ್ ಸಿಂಧೂರ (Operation Sindoor) ಯಶಸ್ಸಿಗಾಗಿ ʻಜೈ ಶ್ರೀರಾಮ್, ಹರಹರ ಮಹದೇವ್ (Operation Mahadev), ಭಾರತ್ ಮಾತಾಕಿ ಜೈʼ ಎಂಬಿತ್ಯಾದಿ ಘೋಷಣೆಗಳ ನಡುವೆ ಪ್ರಧಾನಿ ಮೋದಿ ಅವರನ್ನ ಸನ್ಮಾನಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿಗಳಿಗೆ ಹಾರ ಹಾಕಿ ಗೌರವಿಸಿದರು. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಸೇರಿದಂತೆ ಎನ್‌ಡಿಎ ಸಂಸದರು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ
ನಂತರ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ, ʻಆಪರೇಷನ್ ಸಿಂಧೂರ ಹಾಗೂ ಆಪರೇಷನ್ ಮಹಾದೇವ್ʼ ಯಶಸ್ಸಿನ ಕುರಿತು ನಿರ್ಣಯ ಅಂಗೀಕರಿಸಲಾಯಿತು. ಇದನ್ನೂ ಓದಿ: ಪಹಲ್ಗಾಮ್ ಪಾತಕಿಗಳ ಪತ್ತೆಗೆ ನೆರವಾಯ್ತು ಬುಲೆಟ್ ಶೆಲ್ ಟೆಸ್ಟಿಂಗ್ – ಬ್ಯಾಲಿಸ್ಟಿಕ್ಸ್ ಮ್ಯಾಚಿಂಗ್ ಹೇಗೆ ನಡೆಯುತ್ತೆ?
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ: ಮೈಸೂರು ಮಹಾರಾಜರ ಕೊಡುಗೆಗೆ ಕಾಂಗ್ರೆಸ್ ಅಪಸ್ವರ – ಮಹದೇವಪ್ಪ ಮೊದ್ಲು ಇತಿಹಾಸ ಅರಿಯಲಿ: ಜೋಶಿ ಕಿಡಿ
ಇನ್ನೂ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ಆಗಸ್ಟ್ 15ರಂದು ನಡೆಯಲಿರುವ ತಿರಂಗಾ ಯಾತ್ರೆ, ವಿಪಕ್ಷಗಳ ವಿರುದ್ಧದ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸುವ ಸಾಧ್ಯತೆಗಳಿವೆ. ಅಲ್ಲದೇ ಆಗಸ್ಟ್ 7ರಿಂದಲೇ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಎನ್‌ಡಿಎ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.