ಮೇ 22ಕ್ಕೆ ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ

By
1 Min Read

ಜೈಪುರ: ಪ್ರಧಾನಿ ನರೇಂದ್ರ ಮೋದಿ (PM Modi) ಗುರುವಾರ (ಮೇ 22ರಂದು) ರಾಜಸ್ಥಾನದ ಬಿಕನೇರ್ ವಾಯುನೆಲೆಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿ ಪಾಕಿಸ್ತಾನದಿಂದ ಕೇವಲ 150 ಕಿ.ಮೀ ದೂರದಲ್ಲಿರುವ ನಾಲ್ (Nal) ವಾಯುನೆಲೆಗೆ ಭೇಟಿ ನೀಡಲಿದ್ದು, ಆಪರೇಷನ್ ಸಿಂಧೂರದ (Operation Sindoor) ಪ್ರತೀಕಾರವಾಗಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಡ್ರೋನ್ ದಾಳಿ ವೇಳೆ ಗುರಿಯಾಗಿಸಿಕೊಂಡಿದ್ದ ವಾಯುನೆಲೆಗಳ ಪೈಕಿ ನಾಲ್ ವಾಯುನೆಲೆಯೂ ಒಂದಾಗಿದೆ.ಇದನ್ನೂ ಓದಿ: ಆಂಧ್ರಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಕರ್ನಾಟಕ

ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿ ಮಾಡಲಾದ ದೇಶ್ನೋಕ್ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಹಾಗೂ ಬಿಕನೇರ್-ಮುಂಬೈ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ನೀಡಲಿದ್ದಾರೆ. ಬಳಿಕ 26,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಬಳಿಕ ದೇಶ್ನೋಕ್‌ನಲ್ಲಿರುವ ಕರ್ಣಿ ಮಾತಾ ದೇವಾಲಯದಲ್ಲಿ ದರ್ಶನ ಪಡೆಯಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಆದಮ್‌ಪುರ್ ವಾಯುನೆಲೆಗೆ ಭೇಟಿ, ವಾಯುಪಡೆಯನ್ನು ಉದ್ದೇಶಿಸಿ ಮಾತನಾಡಿದ್ದರು.ಇದನ್ನೂ ಓದಿ: ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿ – ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ

Share This Article