2024ರ ಚುನಾವಣೆಯಲ್ಲಿ ತಮಿಳುನಾಡಿನ ರಾಮನಾಥಪುರಂನಿಂದ ಮೋದಿ ಸ್ಪರ್ಧೆ?

By
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) 2024ರ ಲೋಕಸಭಾ ಚುನಾವಣೆಗೆ (Loka Sabha Election) ಉತ್ತರ ಪ್ರದೇಶದ ಕಾಶಿಯ ಜೊತೆ ತಮಿಳುನಾಡಿನ (Tamil Nadu) ರಾಮನಾಥಪುರಂನಿಂದ (Ramanathapuram) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಹೌದು, ಜುಲೈ 7 ರಂದು ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದ ಕಾರಣ ಈ ಪ್ರಶ್ನೆ ಈಗ ಎದ್ದಿದೆ.

ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ (BJP) ಸಂಘಟನಾ ಅನುಕೂಲಕ್ಕಾಗಿ ಮೂರು ವಲಯಗಳನ್ನಾಗಿ ವಿಂಗಡಿಸಿ ಸಭೆ ನಡೆಸುತ್ತಿದೆ.  ಇದನ್ನೂ ಓದಿ: Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

ಉತ್ತರ, ದಕ್ಷಿಣ ಮತ್ತು ಪೂರ್ವ ವಲಯಗಳನ್ನು ಗುರುತಿಸಲಾಗಿದ್ದು ದಕ್ಷಿಣ ರಾಜ್ಯದ ಸಭೆ ಜುಲೈ 9 ರಂದು ಹೈದರಾಬಾದ್‌ನಲ್ಲಿ ನಡೆದಿದೆ. ಕೇರಳ, ತಮಿಳುನಾಡು, ಪುದುಚೇರಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪಗಳ ಬಿಜೆಪಿ ನಾಯಕರು ಹೈದರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ದಕ್ಷಿಣ ಭಾರತದಿಂದ ಮೋದಿ ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ದಕ್ಷಿಣದ ಪೈಕಿ ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಈಗಾಗಲೇ ಅಧಿಕಾರ ನಡೆಸಿದೆ. ಹೀಗಾಗಿ ಅಧಿಕಾರ ನಡೆಸದ ತಮಿಳುನಾಡಿನಲ್ಲಿ ಸ್ಪರ್ಧಿಸಿದರೆ ಲೋಕಸಭೆಯ ಜೊತೆಗೆ ರಾಜ್ಯದ ವಿಧಾನಸಭಾ ಚುನಾವಣೆಗೆ ಲಾಭವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಈ ಹಿಂದೆ ಕನ್ಯಾಕುಮಾರಿಯಿಂದ ಮೋದಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಈಗ ರಾಮನಾಥಪುರಂನಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.

2024ರ ಚುನಾವಣೆಯಲ್ಲಿ ದಕ್ಷಿಣದಿಂದ ಕನಿಷ್ಠ 50 ಸ್ಥಾನ ಗೆಲ್ಲಲು ಬಿಜೆಪಿ ಗುರಿ ಹಾಕಿಕೊಂಡಿದೆ. ಎಐಡಿಎಂಕೆ ನಾಯಕತ್ವ ದುರ್ಬಲಗೊಂಡ ಹಿನ್ನೆಲೆಯಲ್ಲಿ ಈಗ ಬಿಜೆಪಿಯ ಶಕ್ತಿ ತಮಿಳುನಾಡಿನಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಮೋದಿ ತಮಿಳುನಾಡಿನಿಂದ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.


2019ರ ಚುನಾವಣೆಯಲ್ಲಿ ರಾಮನಾಥಪುರಂನಿಂದ ಮುಸ್ಲಿಂ ಲೀಗ್‌ನಿಂದ ಸ್ಪರ್ಧಿಸಿದ್ದ ನವಸ್ಕಾನಿ 1.27 ಲಕ್ಷ ಮತಗಳಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು. ಮುಸ್ಲಿಂ ಲೀಗ್‌ 4,69,943 ಮತಗಳನ್ನು ಪಡೆದಿದ್ದರೆ ಬಿಜೆಪಿ 3,42,821 ಮತಗಳನ್ನು ಪಡೆದಿದ್ದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್