ಭಾನುವಾರ ಬೆಂಗಳೂರಿಗೆ ಬರಲಿದ್ದಾರೆ ಮೋದಿ – ಹಲವೆಡೆ ವಾಹನ ಸಂಚಾರ ಬಂದ್‌, ಪರ್ಯಾಯ ಮಾರ್ಗ ಯಾವುದು?

Public TV
2 Min Read

ಬೆಂಗಳೂರು: ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಯೆಲ್ಲೋ ಮೆಟ್ರೋ ಮಾರ್ಗ (Namma Metro Yellow Line) ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಭಾನುವಾರ (ಆ.10) ಬೆಂಗಳೂರಿಗೆ (Bengaluru) ಬರಲಿದ್ದಾರೆ. ಮೋದಿಯವರು ಆಗಮಿಸುತ್ತಿರೋದ್ರಿಂದ ಕೆಲವೆಡೆ ಸಂಚಾರ ನಿರ್ಬಂಧ ಹೇರಲಾಗಿದೆ.

ಎಲ್ಲೆಲ್ಲಿ ಸಂಚಾರ ನಿರ್ಬಂಧ?
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಹಿಂಬದಿ ಗೇಟ್ ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ಬಂದ್ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಸಹ ಬೆಳಗ್ಗೆ 9:30ರಿಂದ ಮಧ್ಯಾಹ್ನ 2:00 ಗಂಟೆವರೆಗೆ ಬಂದ್ ಮಾಡಲಾಗುತ್ತಿದೆ. ಇನ್ನು, ಹೊಸೂರು ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ, ಮೋದಿ ಸ್ವಾಗತಕ್ಕೆ ಬಿಜೆಪಿಯಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಖ್ರಿ, ಚಾಲುಕ್ಯ, ಸಂಗೊಳ್ಳಿ ರಾಯಣ್ಣ, ಸೌತ್ ಎಂಡ್, ರಾಗಿಗುಡ್ಡ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸರ್ಕಲ್‍ಗಳಲ್ಲಿ ಕಾರ್ಯಕರ್ತರು ಸೇರಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಪ್ರತಿ ಜಂಕ್ಷನ್‍ನಲ್ಲೂ ಅಂದಾಜು 3ರಿಂದ 5 ಸಾವಿರ ಕಾರ್ಯಕರ್ತರು ಸೇರುವ ಸಾಧ್ಯತೆಗಳಿವೆ. ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ ಖಚಿತ – ಬಿಜೆಪಿ ಕಾರ್ಯಕರ್ತರ ಸಮಾವೇಶ, ರೋಡ್ ಶೋಗೆ ಕೊಕ್

ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳಿಗೆ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:30ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇನ್ನೂ ಬನ್ನೇರುಘಟ್ಟ ರಸ್ತೆ ನೈಸ್ ಟೋಲ್‌ನಲ್ಲಿ ಎಲ್ಲಾ ವಾಹನಗಳನ್ನು ಬನ್ನೇರುಘಟ್ಟ ರಸ್ತೆ ಮುಖಾಂತರ ಸಂಚರಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕೆಳಕಂಡಂತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

+ ಕನಕಪುರ ರಸ್ತೆ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
+ ನಾಯಂಡಹಳ್ಳಿ ನೈಸ್ ಟೋಲ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
+ ಸೋಂಪುರ ನೈಸ್ ಟೋಲ್ ನಿಂದ ಎಲೆಕ್ಟ್ರಾನಿಕ್ ಸಿಟಿ ಬೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
+ ಪಿಇಎಸ್ ಕಾಲೇಜು ನೈಸ್ ಟೋಲ್ ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
+ ಕೆಂಗೇರಿ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
+ ಮಾಗಡಿ ರಸ್ತೆ ನೈಸ್ ಟೋಲ್ ನಿಂದ ಎಲೆಕ್ಟ್ರಾನಿಕ್ ಸಿಟಿ ಬೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
+ ಮಾಧವರ ರಸ್ತೆ ನೈಸ್ ಟೋಲ್ ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
+ ಪಾರ್ಲೆ ಬಿಸ್ಕಟ್ಸ್ ಫಾಕ್ಟರಿ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ

ಪರ್ಯಾಯ ಮಾರ್ಗಗಳು ಯಾವುದು?
* ನೆಲಮಂಗಲ ನೈಸ್ ಟೋಲ್-ಮಾಗಡಿ ರಸ್ತೆ ನೈಸ್ ಟೋಲ್-ಕೆಂಗೇರಿ ನೈಸ್ ಟೋಲ್-ಕನಕಪುರ ಟೋಲ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಸಂಚರಿಸುವ ವಾಹನಗಳನ್ನು ಬನ್ನೇರುಘಟ್ಟ ರಸ್ತೆ ನೈಸ್ ಟೋಲ್‌ನಲ್ಲಿ ತಡೆದು, ಬನ್ನೇರುಘಟ್ಟ ರಸ್ತೆಗೆ ವಾಹನಗಳನ್ನು ಡೈವರ್ಶನ್ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಚಲಿಸುವ ವಾಹನಗಳು ಪ್ರಮುಖವಾಗಿ ಬನ್ನೇರುಘಟ್ಟ ರಸ್ತೆ ಮಾರ್ಗವಾಗಿ-ನೈಸ್ ರಸ್ತೆ ಜಂಕ್ಷನ್-ಶೇರ್ ವುಡ್ ಜಂಕ್ಷನ್-ಕೋಳಿಫಾರಂಗೇಟ್ ಜಂಕ್ಷನ್-ಬನ್ನೇರುಘಟ್ಟ ಗ್ರಾಮ-ಜಿಗಣಿ ಮಾರ್ಗವಾಗಿ ಹೊಸೂರು ರಸ್ತೆ /ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತಲುಪಬಹುದಾಗಿರುತ್ತದೆ.

* ದಾಬಸ್‌ಪೇಟೆ ಬಳಿ ಎಡ ತಿರುವು ಪಡೆದು-ದೊಡ್ಡಬಳ್ಳಾಪುರ-ದೇವನಹಳ್ಳಿ-ಸೂಲಿಬೆಲೆ-ಹೊಸಕೋಟೆ-ಮಾರ್ಗವಾಗಿ ಚಲಿಸಿ-ಚಂದಾಪುರ-ಅತ್ತಿಬೆಲೆ-ಹೊಸೂರು ರಸ್ತೆ ತಲುಪಬಹುದಾಗಿರುತ್ತದೆ. ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಆ.10ರಂದು ಯೆಲ್ಲೋ ಲೈನ್ ಉದ್ಘಾಟಿಸಲಿದ್ದಾರೆ ಮೋದಿ

Share This Article