ಬಾಬರ್‌ನ ಆಕ್ರಮಣ ಭಾರತಕ್ಕೆ ಒಡ್ಡಿದ ಅಪಾಯವನ್ನು ಗುರುನಾನಕ್‌ ಅರಿತಿದ್ದರು: ಮೋದಿ

Public TV
1 Min Read

ಅಹಮದಾಬಾದ್: ಬಾಬರ್‌ನ ಆಕ್ರಮಣದಿಂದ ಭಾರತಕ್ಕೆ ಒಡ್ಡಿದ ಅಪಾಯವನ್ನು ಗುರುನಾನಕ್‌ ಅರಿತಿದ್ದರು ಎಂದು  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಗುಜರಾತಿನ ಕಚ್ ಜಿಲ್ಲೆಯ ಲಖ್‍ಪತ್ ಗುರುದ್ವಾರದಲ್ಲಿ ಗುರುಪುರಬ್ ಆಚರಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಗುರುಗಳು ಎಚ್ಚರಿಸುತ್ತಿದ್ದ ಅಪಾಯಗಳು ಇಂದಿಗೂ ಅದೇ ರೂಪದಲ್ಲಿವೆ. ನಾವು ಜಾಗೃತರಾಗಿ ನಮ್ಮ ದೇಶವನ್ನು ರಕ್ಷಿಸಬೇಕು. ಗುರುನಾನಕ್ ದೇವ್‍ಜಿಯವರ ಆಶೀರ್ವಾದದಿಂದ ನಾವು ನಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತಿದ್ದು, ದೇಶವು ಇನ್ನಷ್ಟು ಎತ್ತರಕ್ಕೆ ತಲುಪುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಸಿಖ್ ಗುರುಗಳು ಎಚ್ಚರಿಸಿದ ಅಪಾಯಗಳು ಇನ್ನೂ ಅಸ್ತಿತ್ವದಲ್ಲಿವೆ. ಔರಂಗಜೇಬ್ ವಿರುದ್ಧ ಗುರು ತೇಜ್ ಬಹದ್ದೂರ್ ಅವರ ಕೆಚ್ಚೆದೆಯ ಹೋರಾಟಗಳು ಭಯೋತ್ಪಾದನೆ ಮತ್ತು ಧಾರ್ಮಿಕ ಉಗ್ರವಾದದ ವಿರುದ್ಧ ಹೇಗೆ ಹೋರಾಡಬೇಕೆಂದು ದೇಶಕ್ಕೆ ಕಲಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

ಗುರುನಾನಕ್ ದೇವ್‍ಜಿ ಬೋಧನೆಗಳ ಕುರಿತು ಮಾತನಾಡಿದ ಮೋದಿ, ಸಿಖ್ ಗುರು ಜನಿಸಿದ ಅವಧಿಯಲ್ಲಿ ವಿದೇಶಿ ಆಕ್ರಮಣಕಾರರು ಭಾರತದ ಆತ್ಮವಿಶ್ವಾಸವನ್ನು ಹದಗೆಡಿಸುತ್ತಿದ್ದರು. ಗುರುನಾನಕ್ ದೇವ್ ಜೀ ತಮ್ಮ ಜ್ಞಾನದ ಬೆಳಕನ್ನು ಹರಡದಿದ್ದರೆ, ಆಗ ಏನಾಗುತ್ತಿತ್ತು? ಗುರು ನಾನಕ್‍ಜಿ ಮತ್ತು ನಂತರದ ಗುರುಗಳು ಭಾರತದ ಪ್ರಜ್ಞೆಯನ್ನು ಬೆಳಗುವಂತೆ ಮಾಡಿರುವುದಲ್ಲದೇ, ಭಾರತವನ್ನು ಸುರಕ್ಷಿತವಾಗಿಡಲು ಮಾರ್ಗವನ್ನು ರೂಪಿಸಿದರು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

ಸಿಖ್ ಗುರುಗಳ ಕೊಡುಗೆ ಕೇವಲ ಸಾಮಾಜಿಕ ಸುಧಾರಣೆಗಳು ಮತ್ತು ಆಧ್ಯಾತ್ಮಿಕತೆಗೆ ಮಾತ್ರ ಸೀಮಿತವಾಗಿಲ್ಲ. ಗುರುಗಳು ದೇಶಕ್ಕೆ ನಾಯಕತ್ವವನ್ನು ಸಹ ನೀಡಿದ್ದಾರೆ. ಗುರು ತೇಜ್ ಬಹದ್ದೂರ್ ಮಾಡಿದ ತ್ಯಾಗದಿಂದಾಗಿ ಈಗಲೂ ಅವರ 400ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಗುರುನಾನಕ್ ದೇವ್‍ಜಿ ನಂತರ ಬಂದ ಸಿಖ್ ಗುರುಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಹಿಂಜರಿಯಲಿಲ್ಲ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

Share This Article
Leave a Comment

Leave a Reply

Your email address will not be published. Required fields are marked *