ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು: ಮೋದಿ

By
2 Min Read

– ಮಂಗಳೂರಿನಲ್ಲಿ ಯೋಜನೆಗಳನ್ನು ಉದ್ಘಾಟಿಸಿ ಮೋದಿ ಭಾಷಣ
– ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿ

ಮಂಗಳೂರು: ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು. ಡಬಲ್‌ ಎಂಜಿನ್‌ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗೋಲ್ಡ್‌ ಫಿಂಚ್‌ ಹೋಟೆಲ್‌ ಮೈದಾನದಲ್ಲಿ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ, ಶಿಲನ್ಯಾಸ ನಡೆಸಿ ಮಾತನಾಡಿದ ಅವರು, ದೇಶಕ್ಕೆ ಸೇನೆ ಸುರಕ್ಷೆ ನೀಡಿದರೆ ಆರ್ಥಿಕವಾಗಿ ದೇಶ ಸುರಕ್ಷಿತವಾಗಬೇಕಾದರೆ ಬಂದರುಗಳು ಅಭಿವೃದ್ಧಿಯಾಗಬೇಕು. ಕಳೆದ 8 ವರ್ಷದಲ್ಲಿ ಮೂಲಸೌಕರ್ಯ ವಿಚಾರದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ರಸ್ತೆಗಳ ಸಂಪರ್ಕಕ್ಕೆ ಭಾರತಮಾಲಾ ಇದ್ದರೆ ಸಮುದ್ರ, ಬಂದರುಗಳ ಸಂಪರ್ಕಕ್ಕೆ ಸಾಗಾರಮಾಲಾವನ್ನು ತರಲಾಗಿದೆ. ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಬಂದರುಗಳ ಸಾಮರ್ಥ್ಯ 8 ಪಟ್ಟು ಹೆಚ್ಚಾಗಿದೆ. ಸಾಗಾರಮಾಲಾ ಯೋಜನೆಯಲ್ಲಿ ಕರ್ನಾಟಕ ಹೆಚ್ಚು ಲಾಭ ಮಾಡಿಕೊಂಡಿದೆ ಎಂದು ವಿವರಿಸಿದರು.


ಮೋದಿ ಭಾಷಣದ ಮುಖ್ಯಾಂಶಗಳು
ಕರ್ನಾಟಕದ ಪಶ್ಚಿಮ ಘಟ್ಟ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಮಂಗಳೂರು ಬಂದರುಗಳಿಗೆ ಕ್ರೂಸ್‌ ಶಿಪ್‌ ಬರಬೇಕು. ವಿದೇಶೀ ಪ್ರವಾಸಿಗರು ಆಗಮಿಸಿದರೆ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಪ್ರವಾಸೋದ್ಯಮ ಹೆಚ್ಚಾದರೆ ಗ್ರಾಮದ್ಯೋಗ, ಆಟೋ ರಿಕ್ಷ ಚಾಲಕರಿಗೆ ಎಲ್ಲರಿಗೂ ಲಾಭ ಸಿಗಲಿದೆ.  ಇದನ್ನೂ ಓದಿ: ಕರಾವಳಿ ಅಭಿವೃದ್ಧಿ ಹೊಂದುತ್ತಿರುವುದು ಡಬಲ್ ಇಂಜಿನ್ ಸರ್ಕಾರದ ಸಾಧನೆ: ಬೊಮ್ಮಾಯಿ

ಕರ್ನಾಟಕದ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದೆ. ಮೀನುಗಾರರಿಗೆ ಅವರ ಆದಾಯವನ್ನು ಹೆಚ್ಚಿಸಲು ಉತ್ತಮ ದೋಣಿಗಳು ಮತ್ತು ತಂತ್ರಜ್ಞಾನವನ್ನು ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಕಳೆದ 8 ವರ್ಷಗಳಲ್ಲಿ ಮೆಟ್ರೋ ಸೌಲಭ್ಯ ಹೊಂದಿರುವ ನಗರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ.

ಇಂದಿನ ಭಾರತವು ಅತ್ಯಾಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನಹರಿಸಿದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ನಾವು ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು.

21ನೇ ಶತಮಾನದಲ್ಲಿ ಭಾರತವು ‘ಹಸಿರು ಬೆಳವಣಿಗೆ’ಯ ದೃಷ್ಟಿಯಲ್ಲಿ ಮುನ್ನಡೆಯುತ್ತಿದೆ. ಕರ್ನಾಟಕದ ಸಂಸ್ಕರಣಾಗಾರಗಳಲ್ಲಿ ಬಳಸಲಾಗುವ ತಂತ್ರಜ್ಞಾನವು ಈ ಉದ್ದೇಶವನ್ನು ಈಡೇರಿಸಲಿದೆ.

ಬೆಂಗಳೂರು – ಹೈದರಾಬಾದ್‌, ಬೆಂಗಳೂರು – ಮೈಸೂರು, ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ವೇ, ಬೆಂಗಳೂರು ಸ್ಯಾಟಲೈಟ್‌ ಯೋಜನೆಗಳು ಜಾರಿಯಲ್ಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನದ ಮೂಲಕ ಹೆಸರು ಮಾಡಬೇಕು. ನಾವು ಕರ್ನಾಟಕದಲ್ಲಿ ಕುಶಲಕರ್ಮಿಗಳಿಗೆ ಮಾರುಕಟ್ಟೆ ಅವಕಾಶಗಳನ್ನು ತೆರೆಯಲು ಸಾಧ್ಯವಾಗುತ್ತದೆ. ಮೇಕ್ ಇನ್ ಇಂಡಿಯಾದ ಯಶಸ್ಸು ಆಗುತ್ತಿದ್ದು ಜಿಡಿಪಿ ಏರಿಕೆಯಾಗುತ್ತಿದೆ. ರಫ್ತು ಹೆಚ್ಚಳ ಮಾಡಲು ಉತ್ತಮ ಲಾಜಿಸ್ಟಿಕ್ಸ್‌ಗಳ ನಿರ್ಮಾಣ ಅಗತ್ಯವಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *