ಎಕ್ಸ್‌ನಲ್ಲಿ100000000 ಫಾಲೋವರ್ಸ್‌ – ಮೋದಿ ವಿಶೇಷ ಸಾಧನೆ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎಕ್ಸ್‌ನಲ್ಲಿ (ಟ್ವಿಟ್ಟರ್‌) 100 ಮಿಲಿಯನ್‌ (10 ಕೋಟಿ) ಫಾಲೋವರ್ಸ್‌ ಹೊಂದುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಎಕ್ಸ್‌ನಲ್ಲಿ (X) ಭಾನುವಾರ ಮೋದಿ ಫಾಲೋವರ್ಸ್‌ ಸಂಖ್ಯೆ 100 ಮಿಲಿಯನ್ ಗಡಿಯನ್ನು ದಾಟಿದೆ. ಈ ಮೂಲಕ ಸದ್ಯ ದೇಶವನ್ನು ಮುನ್ನಡೆಸುವ ಜಗತ್ತಿನ ನಾಯಕರ ಪಟ್ಟಿಯಲ್ಲಿ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋರ್ವಸ್‌ ಹೊಂದಿರುವ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರವಾಗಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ವಿಚ್ಚೇದನ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ತೀರ್ಪು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದ ಮುಸ್ಲಿಂ ಬೋರ್ಡ್‌

 


ಭಾರತದ ಅರವಿಂದ್‌ ಕೇಜ್ರಿವಾಲ್‌ (Aravind Kejriwal) ಮತ್ತು ರಾಹುಲ್‌ ಗಾಂಧಿ (Rahul Gandhi) ಅವರಿಗೆ ಹೋಲಿಸಿದರೆ ಮೋದಿ ಫಾಲೋರ್ವಸ್‌ಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ಅರವಿಂದ್‌ ಕೇಜ್ರಿವಾಲ್‌ ಅವರನ್ನು2.75 ಕೋಟಿ ಮಂದಿ ಫಾಲೋ ಮಾಡುತ್ತಿದ್ದರೆ ರಾಹುಲ್‌ ಗಾಂಧಿ ಅವರನ್ನು 2.64 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

ಸದ್ಯ ಅಧಿಕಾರದಲ್ಲಿರುವ ಮುಖ್ಯಸ್ಥರ ಪೈಕಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 3.81 ಕೋಟಿ, ಟರ್ಕಿಯ ಅಧ್ಯಕ್ಷ ಎರ್ಡೊಗನ್ 2.15 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಮೋದಿ, ಚರ್ಚೆ, ಒಳನೋಟಗಳು, ಜನರ ಆಶೀರ್ವಾದ, ರಚನಾತ್ಮಕ ಟೀಕೆಗಳನ್ನು ಈ ರೋಮಾಂಚಕ ಮಾಧ್ಯಮದಲ್ಲಿ ನೋಡಲು ಸಂತೋಷವಾಗುತ್ತಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಟಿಕೆಟ್‌ ದರ ಏರಿಸದೇ ಇದ್ದರೆ ಸಂಸ್ಥೆ ಉಳಿಯಲ್ಲ: ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷ ಶ್ರೀನಿವಾಸ್‌

ಮೋದಿ ಅವರು ಗುಜರಾತ್‌ ಸಿಎಂ ಆಗಿದ್ದಾಗಲೇ ಟ್ವಿಟ್ಟರ್‌ನಲ್ಲಿ ಖಾತೆ ತೆರೆದಿದ್ದು 15 ವರ್ಷಗಳಿಂದ ಈ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. ಜನವರಿ 2009 ರಲ್ಲಿ ಮೋದಿ ಅವರು ಟ್ವಿಟ್ಟರ್‌ಗೆ ಎಂಟ್ರಿಯಾಗಿದ್ದು ಇಲ್ಲಿಯವರೆಗೆ 2,671 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.

ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಟೆಸ್ಲಾ ಸಂಸ್ಥಾಪಕ, ಎಕ್ಸ್‌ ಮಾಲೀಕ ಎಲೋನ್‌ ಮಸ್ಕ್‌ ಅವರಿಗಿದೆ. ಮಸ್ಕ್‌ ಅವರಿಗೆ 18.96 ಕೋಟಿ ಫಾಲೋವರ್ಸ್‌ ಇದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರಿಗೆ 13.17 ಕೋಟಿ ಮಂದಿ, ಹಾಡುಗಾರ ಜಸ್ಟಿನ್ ಬೈಬರ್ ಅವರಿಗೆ 11.10 ಕೋಟಿ ಫಾಲೋರ್ಸ್‌ಗಳಿದ್ದಾರೆ.

 

Share This Article