ನಿರ್ಮಲಾ ಬಜೆಟ್ ನಿರೀಕ್ಷೆ ಏನು? ಚಿನ್ನಕ್ಕೂ ಕೇಳ್ತಾರಾ ಲೆಕ್ಕ? ಸವಾಲುಗಳೇನು?

Public TV
3 Min Read

ನವದೆಹಲಿ: ಆರ್ಥಿಕತೆಯ ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ 2ರ ಮೊದಲ ಬಜೆಟ್ ಇಂದು ಮಂಡನೆಯಾಗುತ್ತಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.

ಆರ್ಥಿಕ ಕುಸಿತ, ಆದಾಯ ಕೊರತೆ, ಕನಿಷ್ಠ ಜಿಡಿಪಿ, ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಸೂಚಿಸುವ ಮಂತ್ರದಂಡ ಇಂದಿನ ಬಜೆಟ್‍ನಲ್ಲಿ ಇರುತ್ತಾ ಎನ್ನುವ ನಿರೀಕ್ಷೆ ಹೆಚ್ಚಿದೆ.

ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಿರೋ ಆರ್ಥಿಕ ಸರ್ವೆಯಲ್ಲಿ ಜಾಗತಿಕ ಹಿಂಜರಿತದ ಪರಿಣಾಮ ಭಾರತದ ಮೇಲೂ ಆಗಿದೆ. ಹೀಗಾಗಿ, ದೇಶದಲ್ಲಿ ಆರ್ಥಿಕ ಹಿಂಜರಿತ ಇತ್ತು ಅಂತ ಹೇಳಿದೆ. ಪ್ರಸಕ್ತ ವರ್ಷದಲ್ಲಿ ಶೇ.6ರಿಂದ ಶೇ.6.5ರಷ್ಟು ಆರ್ಥಿಕ ಪ್ರಗತಿಯ ಅಂದಾಜು ಮಾಡಲಾಗಿದೆ. ನೀತಿ-ನಿಯಮಾವಳಿಗಳ ಸುಧಾರಣೆ, ಸಂಪನ್ಮೂಲದ ಕ್ರೋಢೀಕರಣ, ವಿದೇಶಿ ವಿನಿಮಯ ಮೀಸಲಿನಲ್ಲಿ ಸ್ಥಿರತೆ, ಎಫ್‍ಡಿಐ ಒಳಹರಿವಿನ ಹೆಚ್ಚಳ, ಬ್ಯಾಂಕ್‍ಗಳ ಖಾಸಗೀಕರಣದ ಸುಳಿವು, ಹಣದುಬ್ಬರಕ್ಕೆ ಕಡಿವಾಣ, ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡುವ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಬಜೆಟ್ ನಿರೀಕ್ಷೆ ಏನು?
ವಿಧವೆ, ಹಿರಿಯ ನಾಗರಿಕರು, ಅಂಗವಿಕಲರ ಪಿಂಚಣಿ ಏರಿಕೆ?
> 80 ವರ್ಷ ಮೀರಿದ ಹಿರಿಯರಿಗೆ ಸದ್ಯ 500 ರೂ. ಮಾಸಿಕ ಪಿಂಚಣಿ
> 1 ಸಾವಿರ ರೂಪಾಯಿಗೆ ಏರಿಸಲು ಚಿಂತನೆ
> ವಿಧವೆಯರ ಪಿಂಚಣಿ ಕೂಡ ಹೆಚ್ಚಿಸಲು ಆಲೋಚನೆ

ರೈತರಿಗೆ ಹೆಚ್ಚಾಗುತ್ತಾ ಸಹಾಯಧನ?
> ಕಿಸಾನ್ ಸಮ್ಮಾನ್ ಯೋಜನೆಯಡಿ ಈಗ ವಾರ್ಷಿಕ 6 ಸಾವಿರ ರೂ. ನೀಡಲಾಗುತ್ತಿದೆ.
> 6 ಸಾವಿರದಿಂದ 9 ಸಾವಿರಕ್ಕೆ ಹೆಚ್ಚಳ ಸಾಧ್ಯತೆ

ರೈತರಿಗೂ ಸಿಗುತ್ತಾ ಪಿಂಚಣಿ…?
> ಮಾಸಿಕ 3 ಸಾವಿರ ರೂಪಾಯಿ ಪಿಂಚಣಿಗೂ ಚಿಂತನೆ
> 60 ವರ್ಷ ದಾಟಿದವರಿಗೆ ಪಿಂಚಣಿ.?

ಬಿಪಿಎಲ್ ಕಾರ್ಡ್‍ದಾರಿಗೆ ಗಿಫ್ಟ್!
> ಮನೆಯಿಲ್ಲದ ಬಡವರಿಗೆಲ್ಲಾ ಮನೆ ಭಾಗ್ಯ
> 2020ಕ್ಕೆ 1.95 ಕೋಟಿ ಮನೆಗಳ ನಿರ್ಮಾಣ ಗುರಿ

ಆದಾಯ ತೆರಿಗೆಯಲ್ಲಿ ವಿನಾಯ್ತಿ
> 5 ಲಕ್ಷ ಆದಾಯಕ್ಕೆ ತೆರಿಗೆ ವಿನಾಯ್ತಿ ಸಾಧ್ಯತೆ

ಕಪ್ಪುಹಣ ಕಕ್ಕಿಸಲು ಡೇಂಜರಸ್ ರೂಲ್ಸ್ ಜಾರಿ?
> ಕಪ್ಪುಕುಳಗಳನ್ನು ಹಿಡಿಯಲು ಘೋಷಣೆ ಸಾಧ್ಯತೆ
> ಡಿಜಿಟಲ್ ಪಾವತಿಗೆ ಉತ್ತೇಜನ
> ದೊಡ್ಡಮಟ್ಟದ ಹಣಕಾಸು ವ್ಯವಹಾರಕ್ಕೆ ನಿಬಂಧನೆ

ಚಿನ್ನಕ್ಕೂ ಹಾಕುತ್ತಾರಾ ಟ್ಯಾಕ್ಸ್?
> ನೋಟು ಬ್ಯಾನ್ ವೇಳೆ ಅಪಾರ ಚಿನ್ನ ಖರೀದಿ ಶಂಕೆ
> ಚಿನ್ನಕ್ಕೆ ಲೆಕ್ಕ ಕೇಳುವ ವಿಶಿಷ್ಠ ಯೋಜನೆ ಜಾರಿ ಸಾಧ್ಯತೆ
> ಇಂತಿಷ್ಟೇ ಚಿನ್ನ ಹೊಂದಿರಬೇಕೆಂಬ ನಿಯಮ ಜಾರಿ?
> ಐಟಿ ಮುಂದೆ ಸ್ವಯಂ ಘೋಷಣೆಗೆ ಕಾನೂನು
> ಹೆಚ್ಚು ಚಿನ್ನ ಹೊಂದಿದ್ದರೆ ಕ್ಷಮಾದಾನ ಕಾನೂನು?
> ತೆರಿಗೆ ರೂಪದಲ್ಲಿ ದಂಡ ಸಂಗ್ರಹ ಪ್ಲಾನ್

ಸ್ವಿಸ್‍ಬ್ಯಾಂಕ್ ಅಕೌಂಟ್ ಬೇಟೆ
> ಕಪ್ಪು ಹಣದಾರರಿಗೆ ಬಜೆಟ್‍ನಲ್ಲಿ ಬಿಗ್ ಶಾಕ್
> ಮೋದಿ ಕೈಯಲ್ಲಿ ಸ್ವಿಸ್ ಖಾತೆದಾರರ ಪಟ್ಟಿ
> ಹಣ ಘೋಷಿಸಿಕೊಂಡು ದಂಡ ಕಟ್ಟಲು ಸೂಚಿಸಬಹುದು

ನಿರ್ಮಲಾ ಮುಂದಿನ ಸವಾಲುಗಳೇನು?
ಸವಾಲು#1 – ಆರ್ಥಿಕತೆ ಮೇಲೆತ್ತಬೇಕು
ಸವಾಲು#2 – ವಿತ್ತೀಯ ಕೊರತೆ
ಸವಾಲು#3 – ಉದ್ಯೋಗ ಸೃಷ್ಟಿ
ಸವಾಲು#4 – ರಫ್ತು, ಉತ್ಪಾದನಾ ನೀತಿಯ ಪರಾಮರ್ಶೆ
ಸವಾಲು#5 – ರೈತರ ಆದಾಯ ದ್ವಿಗುಣ
ಸವಾಲು#6 – ನಿರ್ಮಾಣ ವಲಯದ ಕುಸಿತ

ನಿರ್ಮಲಾ ಮೇಲಿನ ನಿರೀಕ್ಷೆಗಳು..!
ನಿರೀಕ್ಷೆ#1 – ವೈಯಕ್ತಿಕ ಆದಾಯ ತೆರಿಗೆ ಕಡಿತ
ನಿರೀಕ್ಷೆ#2 – ಹೂಡಿಕೆದಾರರಿಗೆ ರಿಲೀಫ್
ನಿರೀಕ್ಷೆ#3 – ನವಭಾರತಕ್ಕೆ ಹೆಚ್ಚಿನ ಖರ್ಚು
ನಿರೀಕ್ಷೆ#4 – ಗ್ರಾಮೀಣ ಭಾರತಕ್ಕೆ ಹಣದ ಹರಿವು
ನಿರೀಕ್ಷೆ#5 – ಬಡ್ಡಿ ಕಡಿತ

Share This Article
Leave a Comment

Leave a Reply

Your email address will not be published. Required fields are marked *