ಕರ್ನಾಟಕದ ಅಭಿವೃದ್ಧಿಯೇ ಬಿಜೆಪಿ ಅಜೆಂಡಾ -ಅಭ್ಯರ್ಥಿಗಳಿಗೆ ಮೋದಿ ಪ್ರಚಾರ ಪಾಠ

Public TV
2 Min Read

-ಕಾಂಗ್ರೆಸ್‍ ಸಂಸ್ಕೃತಿಯನ್ನು ಹೊಡೆದುರುಳಿಸಿ

ಬೆಂಗಳೂರು: ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ಇನ್ನು ಪಕ್ಷದ ಹಿರಿಯ ನಾಯಕರು ತಮ್ಮ ಕಾರ್ಯಕರ್ತರಿಗೆ ಯಾವ ರೀತಿ ಪ್ರಚಾರದಲ್ಲಿ ಭಾಗಿಯಾಗಬೇಕೆಂಬುದರ ಬಗ್ಗೆ ತರಬೇತಿಯನ್ನು ನೀಡುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಸಹ ಇಂದು ನಮೋ ಆಪ್ ಮೂಲಕ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಿದ್ರು. ಇಂದು ಬೆಳಗ್ಗೆ 9 ಗಂಟೆಗೆ ಪಕ್ಷದ ಸಂಸದರು, ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು.

ಸಂವಾದದ ಪ್ರಮುಖ 10 ಅಂಶಗಳು:
1. ಸಂವಾದದ ಆರಂಭದಲ್ಲಿಯೇ ಪ್ರಧಾನಿ ಮೋದಿ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಪಕ್ಷದ ಅಜೆಂಡಾ ಅಂದ್ರು.
2. ಬಿಜೆಪಿ ರಾಜಕೀಯಕ್ಕಿಂತೂ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡುತ್ತದೆ.
3. ವಿಧಾನಸಭಾ ಕ್ಷೇತ್ರ ಗೆಲ್ಲೋದು ನಮ್ಮ ಗುರಿ ಅಲ್ಲ. ಪ್ರತಿಯೊಂದು ಬೂತ್ ಗಳನ್ನು ಗೆಲ್ಲುವುದರ ಜೊತೆಗೆ ಅಲ್ಲಿಯ ಜನರೊಂದಿಗೆ ಬೆರೆಯಬೇಕು. ಎಷ್ಟು ಪುರುಷ ಕಾರ್ಯಕರ್ತರಿದ್ದಾರೋ, ಅಷ್ಟೇ ಮಹಿಳಾ ಕಾರ್ಯಕರ್ತರು ಇರಬೇಕು.
4. ಕರ್ನಾಟಕದ ಚುನಾವಣೆಯನ್ನು ನಮ್ಮ ಶಕ್ತಿಯ ಆಧಾರದ ಮೇಲೆ ಜಯಿಸಬೇಕು.
5. ಇತ್ತೀಚಿನ ಕೆಲವು ಚುನಾವಣೆಗಳನ್ನು ಗಮನಿಸಿದಾಗ ಕೆಲವೊಂದು ಪಕ್ಷಗಳು ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿವೆ. ಇದ್ರಿಂದ ಜನರು ಧರ್ಮ ಮತ್ತು ರಾಜಕಾರಣದಲ್ಲಿ ಸಿಲುಕಿದ್ದಾರೆ.
6. ಕಾಂಗ್ರೆಸ್ 4 ವರ್ಷಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಕೇವಲ 380 ಕೋಟಿ ರೂ. ಬಳಸಿದೆ. ಆದ್ರೆ 1600 ಕೋಟಿಯನ್ನು ಮೂಲ ಸೌಕರ್ಯ ಅಭಿವೃದ್ಧಿಗಾಗಿ ಬಳಸಿದ್ದೇವೆ.
7. ಚುನಾವಣಾ ಪ್ರಚಾರದ ಕೆಲಸವನ್ನು ವಿದೇಶಿ ಏಜೆಂಟ್‍ಗಳನ್ನು ನೇಮಿಸುವ ಜನರನ್ನು ಕಾಂಗ್ರೆಸ್ ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದೆ.
8. ಬಿಜೆಪಿ ಕಾರ್ಯಕರ್ತರು ಮತದಾರರೊಂದಿಗೆ ಉತ್ತಮ ಬಾಂಧವ್ಯನ್ನು ಹೊಂದಬೇಕು.
9. ಕೇಂದ್ರ ಸರ್ಕಾರ ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ 14,000 ಕೋಟಿ ರೂ. ಹಣವನ್ನು ಮೀಸಲಿರಿಸಿದೆ. ಕೇವಲ 4 ವರ್ಷಗಳಲ್ಲಿ 1,750 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ, ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಸಬ್ ಅರ್ಬನ್ ರೈಲುಗಳನ್ನು ಘೋಷಣೆ ಮಾಡಲಾಗಿದೆ.
10. ಇದೇ ವೇಳೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದ ಅಪಘಾತಕ್ಕೆ ಸಂತಾಪ ಸೂಚಿಸಿದ್ರು. ಘಟನೆ ಸಂಬಂಧ ರೈಲ್ವೆ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಅಂತಾ ಅಂದ್ರು.

ಭಾರತೀಯ ರಾಜಕೀಯ ದೋಷಗಳ ಮೂಲ ಕಾಂಗ್ರೆಸ್. ಹಾಗಾಗಿ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸ್ಕೃತಿಯನ್ನು ತೆಗೆದು ಹಾಕಿದ್ರೆ ಮಾತ್ರ ರಾಜಕೀಯ ವ್ಯವಸ್ಥೆಯನ್ನು ಶುದ್ಧಿಕರಿಸಲು ಸಾಧ್ಯ ಅಂತಾ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *