ಪಾಕಿಸ್ತಾನದಲ್ಲೂ ಜನ ಮೋದಿಯನ್ನು ಇಷ್ಟಪಡುತ್ತಾರೆ: ಅನೂಪ್ ಜಲೋಟಾ

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರನ್ನು ಗಾಯಕ ಅನೂಪ್ ಜಲೋಟಾ (Anup Jalota) ಅವರು ಶ್ಲಾಘಿಸಿದ್ದಾರೆ. ಅಲ್ಲದೆ ಪಾಕಿಸ್ತಾನದ ಜನ ಕೂಡ ನರೇಂದ್ರ ಮೋದಿಯವರನ್ನು ಭಾರೀ ಇಷ್ಟ ಪಡುತ್ತಾರೆ ಎಂದು ಹೇಳಿದ್ದಾರೆ.

ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಮಾತನಾಡಿದ ಗಾಯಕ, ನೆರೆಯ ದೇಶದಲ್ಲಿ ಅವರಂತಹ ನಾಯಕನನ್ನು ಬಯಸುತ್ತೇವೆ ಎಂದು ಪಾಕಿಸ್ತಾನ (Pakistan) ದ ಜನ ಹೇಳುತ್ತಾರೆ ಎಂದರು. ಇದನ್ನೂ ಓದಿ: ಶೀಘ್ರವೇ ಮುಂಬೈ ಬ್ಲಾಸ್ಟ್ ಮಾಡ್ತೀನಿ – ಬೆದರಿಕೆ ಹಾಕಿದಾತ ಅರೆಸ್ಟ್

ಜನರು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತಾರೆ. ಒಟ್ಟಿನಲ್ಲಿ ಪಾಕಿಸ್ತಾನವೇ ಮೋದಿಯವರನ್ನು ಪ್ರೀತಿಸುತ್ತಿದೆ ಅಂತಾನೇ ಹೇಳಬಹುದು. ಮೋದಿಯಂತಹ ನಾಯಕ ನಮಗೆ ಬೇಕು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಇತ್ತ ಸಿಡ್ನಿಯ ಜನ ಕೂಡ ಮೋದಿಯವರು ಶಾಶ್ವತವಾಗಿ ಪ್ರಧಾನಿಯಾಗಿರುವಂತೆ ಬಯಸುತ್ತಾರೆ ಎಂದು ಹೇಳಿದರು.

ಮೂರು ದಿನದ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಸ್ಟ್ರೇಲಿಯಾಗೆ ಆಗಮಿಸಿದರು. ಜಿ7 ಸಮ್ಮೇಳನಕ್ಕಾಗಿ ಜಪಾನ್ ನ ಹಿರೋಶಿಮಾಗೆ ತೆರಳಿದ್ದ ಮೋದಿ ಬಳಿಕ ಪಪುವಾ ನ್ಯೂಗಿನಿ ದೇಶಕ್ಕೆ ಭೇಟಿ ನೀಡಿದ್ದರು.

 

Share This Article