ಪ್ರಧಾನಿ ಭೇಟಿಯಾದ ಸೆರ್ಗಿಯೊ ಗೋರ್ – ಟ್ರಂಪ್ ಮೋದಿಯನ್ನ ಗ್ರೇಟ್‌ ಫ್ರೆಂಡ್‌ ಅಂತ ಪರಿಗಣಿಸ್ತಾರೆ: ಯುಎಸ್‌ ರಾಯಭಾರಿ

Public TV
2 Min Read

ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಪ್ತ ರಾಜಕೀಯ ಸಹಾಯಕ ಹಾಗೂ ಅಮೆರಿಕಾದ ಭಾರತೀಯ ರಾಯಭಾರಿ ಸೆರ್ಗಿಯೊ ಗೋರ್‌ (Sergio Gor) ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಇಂದು ಭೇಟಿಯಾದರು.

ತಮ್ಮನ್ನು ಭೇಟಿಯಾದ ಸೆರ್ಗಿಯೋ ಅವರನ್ನ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಸೆರ್ಗಿಯೋ, ಪ್ರಧಾನಿಗಳಿಗೆ ಟ್ರಂಪ್‌ ಹಾಗೂ ಮೋದಿ (Narendra Modi) ಅವರು ಇರುವ ಫೋಟೋವನ್ನ ಉಡುಗೊರೆಯಾಗಿ ನೀಡಿದರು. ಜೊತೆಗೆ ಟ್ರಂಪ್‌ ವಿಶೇಷ ಸಂದೇಶವನ್ನೂ ಹಂಚಿಕೊಂಡರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ರೈತರಿಗೆ ಬಿಗ್ ಗಿಫ್ಟ್ – 35 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ

ಸೆರ್ಗಿಯೋ ಅವರ‌ ಭೇಟಿ ಬಳಿಕ ಎಕ್ಸ್‌ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತಕ್ಕೆ ಅಮೆರಿಕ ನಿಯೋಜಿತ ರಾಯಭಾರಿ ಸೆರ್ಹಿಯೊ ಗೋರ್‌ ಅವರನ್ನ ಸ್ವಾಗತಿಸಲು ಸಂತೋಷವಾಗಿದೆ. ಅವ್ರ ಅಧಿಕಾರವಧಿಯು ಭಾರತ ಮತ್ತು ಅಮೆರಿಕದ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ಮೋದಿ ಅವರ ಭೇಟಿ ಬಳಿಕ ಮಾತನಾಡಿರುವ ಸೆರ್ಗಿಯೊ ಗೋರ್, ಟ್ರಂಪ್‌ ಅವರ ವಿದೇಶ ಸಂದೇಶವನ್ನ ಹಂಚಿಕೊಂಡಿದ್ದಾರೆ. ʻಡೊನಾಲ್ಡ್‌ ಟ್ರಂಪ್‌ ಪ್ರಧಾನಿ ಮೋದಿ ಅವರನ್ನ ವೈಯಕ್ತಿಕ ಸ್ನೇಹಿತ ಹಾಗೂ ಗ್ರೇಟ್‌ ಫ್ರೆಂಡ್‌ ಅಂತಲೇ ಪರಿಗಣಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ

ಉಭಯ ನಾಯಕರ ನಡುವಿನ ಭೇಟಿಯು ಪ್ರಸ್ತುತ ಭಾರತ-ಅಮೆರಿಕ ನಡುವಿನ ವ್ಯಾಪಾರ ಯುದ್ಧಕ್ಕೆ ತೆರೆ ಎಳೆಯಲಿದೆ. ಜೊತೆಗೆ ಪರಸ್ಪರ ದ್ವಿಪಕ್ಷೀಯ ಸಹಕಾರಕ್ಕೆ ನೆರವಾಗಲಿದೆ ಎಂದು ನಂಬಲಾಗಿದೆ.

ಕಳೆದ ಆಗಸ್ಟ್‌ 22ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆರ್ಗಿಯೊ ಗೋರ್ ಅವರನ್ನ ರಾಯಭಾರಿಯಾಗಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದರು. ಇದನ್ನೂ ಓದಿ: ಕಲಾವಿದೆ ಅರ್ಚನಾ ಪಾಟೀಲ್ ವಿರುದ್ಧದ ಪೋಕ್ಸೊ ಕೇಸ್‌ ವಿಚಾರಣೆಗೆ ಸುಪ್ರೀಂ ತಡೆ

Share This Article