7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ

Modi to china

– ಎಸ್‌ಸಿಒ ಶೃಂಗಸಭೆಯಲ್ಲಿ ಭಾಗಿ
– ಭಾನುವಾರ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಭೇಟಿ

ಬೀಜಿಂಗ್:  ಜಪಾನ್ (Japan) ಪ್ರವಾಸದ ಬಳಿಕ ಇದೀಗ ಪ್ರಧಾನಿ ಮೋದಿ (PM Modi) ಚೀನಾ (China) ಪ್ರವಾಸ ಕೈಗೊಂಡಿದ್ದು, ಟಿಯಾಂಜಿನ್‌ಗೆ (Tianjin) ಬಂದಿಳಿದಿದ್ದಾರೆ.

China To modi

7 ವರ್ಷಗಳ ನಂತರ ಪ್ರಧಾನಿ ಮೋದಿ ಚೀನಾಗೆ ಭೇಟಿ ನೀಡುತ್ತಿದ್ದು, ಇಂದಿನಿಂದ (ಆ.30) ಸೆ.1ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಶನಿವಾರ (ಆ.30) ಸಂಜೆ 5ರ ಸುಮಾರಿಗೆ ಟಿಯಾಂಜಿನ್‌ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಅಲ್ಲಿನ ಭಾರತೀಯ ಸಮುದಾಯ ಪ್ರೀತಿಯಿಂದ ಬರಮಾಡಿಕೊಂಡಿತು.ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85%ಗೆ ಏರಿಕೆ: ತೇಜಸ್ವಿ ಯಾದವ್

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ಅವರ ಆಹ್ವಾನದ ಮೇರೆಗೆ ಶಾಂಘೈ ಸಹಕಾರ ಮಂಡಳಿ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಆ.31ರಂದು ಸಭೆಯ ಔತಣಕೂಟದಲ್ಲಿ ಭಾಗಿಯಾಗಲಿದ್ದು, ಸೆ.1ರಂದು ಮುಖ್ಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಕೆಲವು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.

Modi 5

ಇನ್ನೂ ಭಾನುವಾರ (ಆ.31) ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿರುವ ಹೆಚ್ಚುವರಿ ಆಮದು ಸುಂಕದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ರಷ್ಯಾ (Russia) ಅಧ್ಯಕ್ಷ ಪುಟಿನ್ (Putin) ಅವರನ್ನು ಭೇಟಿಯಾಗಲಿದ್ದಾರೆ.ಇದನ್ನೂ ಓದಿ: ಇನ್ಮುಂದೆ ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ: ರಾಜನಾಥ್ ಸಿಂಗ್