– ಅಮಿತ್ ಶಾ ಸೇರಿ ಪ್ರಮುಖ ಸಚಿವರು ಭಾಗಿ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ (West Asia War Situation) ನಡುವೆ ದೇಶದಲ್ಲಿ ಇಂಧನ ಭದ್ರತೆ, ಇಂಧನ ಪೂರೈಕೆ ಮತ್ತು ಆರ್ಥಿಕತೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿಂದು ಸಭೆ ನಡೆಯಲಿದೆ.
ಇಂದು (ಬುಧವಾರ) ಸಂಜೆ 7 ಗಂಟೆಯಿಂದ ಸಂಪುಟ ಸಮಿತಿ (CCS) ಯೊಂದಿಗೆ ಮ್ಯಾರಥಾನ್ ಸಭೆ ನಡೆಯಲಿದೆ. ಕಳೆದ ಮಾರ್ಚ್ 22 ರಂದೂ ಇಂಧನ ಪೂರೈಕೆಯನ್ನು (Energy Supply) ಪರಿಶೀಲಿಸಲು ಸಭೆ ನಡೆಸಲಾಗಿತ್ತು. ಇದನ್ನೂ ಓದಿ: ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧನೆ ನಿಶ್ಚಿತ: ಪ್ರಧಾನಿ ಮೋದಿ ವಿಶ್ವಾಸ
ಅಂದಿನ ಸಭೆಯಲ್ಲಿ ಅಗತ್ಯ ಸರಕುಗಳು ಮತ್ತು ನಿರ್ಣಾಯಕ ವಲಯಗಳಿಗೆ ಇಂಧನ ಮತ್ತು ತೈಲ ಪೂರೈಕೆಗಳ ಕುರಿತು ಮೌಲ್ಯಮಾಪನ ನಡೆಸಲಾಗಿತ್ತು. ಇದೀಗ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ಉನ್ನತಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಲ್ಗೊಳ್ಳಿದ್ದಾರೆ. ಇದರೊಂದಿಗೆ ಆರ್ಥಿಕತೆ ಮತ್ತು ಮೂಲಕ ಸೌಕರ್ಯಗಳಿಗೆ ಸಂಬಂಧಿಸಿದ ಖಾತೆ ನಿರ್ವಹಿಸುವ ಹಿರಿಯ ಸಚಿವರು ಉಪಸ್ಥಿತರಿರಿಲಿದ್ದಾರೆ. ಇದನ್ನೂ ಓದಿ: ಪ್ರೀಮಿಯಂ ಪೆಟ್ರೋಲ್ 160 ರೂ.ಗೆ ಏರಿಕೆ – ಜೆಟ್ ಇಂಧನ ಬೆಲೆ 2 ಲಕ್ಷ ರೂ.ಗೆ ಜಿಗಿತ


