ಬಾಲಕಿಯ ಪಲ್ಲವಗಳ ಪಲ್ಲವಿಯಲ್ಲಿ ಹಾಡನ್ನು ಕೊಂಡಾಡಿದ ಮೋದಿ

Public TV
1 Min Read

ಬೆಂಗಳೂರು: ಕನ್ನಡದ ಹಾಡಿಗೆ ಕೈಗಳಿಂದ ಸುಶ್ರಾವ್ಯವಾಗಿ ಪಿಯಾನೋ ಬಾರಿಸಿದ ಪುಟ್ಟ ಪೋರಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಫಿದಾ ಆಗಿದ್ದಾರೆ.

ಕೆ.ಎಸ್. ನರಸಿಂಹಸ್ವಾಮಿ ಅವರು ರಚಿಸಿದ ಪಲ್ಲವಗಳ ಪಲ್ಲವಿಯಲ್ಲಿ (pallavagala pallaviyallli) ಹಾಡಿಗೆ ತಕ್ಕಂತೆ ಪಿಯಾನೋ (Piano) ಬಾರಿಸಿದ ಪುಟಾಣಿ ಶಾಲ್ಮಲಿಯ (Shalmalee) ವೀಡಿಯೋವನ್ನು ಪ್ರಧಾನಿ ಮೋದಿ ರೀಟ್ವೀಟ್ ಮಾಡಿದ್ದಾರೆ. ಶಾಲ್ಮಲಿಯ ಅಸಾಧಾರಣ ಪ್ರತಿಭೆ, ಸೃಜನಶೀಲತೆಯನ್ನು ಹೊಗಳಿದ್ದಾರೆ. ಭವಿಷ್ಯದಲ್ಲಿ ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ದೇಶದ ಮೊದಲ ವಾಟರ್ ಮೆಟ್ರೋ, ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

ಮೋದಿ ಟ್ವೀಟ್‌ ಮಾಡಿ, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗು ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ.

Share This Article