ಗಂಗಾ ಬಿಹಾರದಿಂದ ಬಂಗಾಳಕ್ಕೆ ಹರಿದು ಬಿಜೆಪಿಗೆ ಗೆಲುವಿನ ಹಾದಿ ಸೃಷ್ಟಿಸಿದೆ: ಮೋದಿ

Public TV
1 Min Read

– ನಮ್ಮ ಮುಂದಿನ ಗುರಿ ಬಂಗಾಳ ಎಂದ ಪ್ರಧಾನಿ

ಪಾಟ್ನಾ: ಗಂಗಾ ಬಿಹಾರದಿಂದ ಬಂಗಾಳಕ್ಕೆ ಹರಿದು ಬಿಜೆಪಿಗೆ ಗೆಲುವಿನ ಹಾದಿಯನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವಿನ ಹಿನ್ನೆಲೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಮೋದಿ, ಬಿಹಾರದಲ್ಲಿ ಎನ್‌ಡಿಎ ಪಡೆದ ಭಾರಿ ಗೆಲುವು ನೆರೆಯ ಪಶ್ಚಿಮ ಬಂಗಾಳದಲ್ಲಿಯೂ ಇದೇ ರೀತಿಯ ಪ್ರದರ್ಶನಕ್ಕೆ ಅಡಿಪಾಯ ಹಾಕಿದೆ ಎಂದು ತಿಳಿಸಿದರು.

ಗಂಗಾ ನದಿ ಬಿಹಾರದ ಮೂಲಕ ಬಂಗಾಳಕ್ಕೆ ಹರಿಯುತ್ತದೆ. ಬಿಹಾರದಲ್ಲಿನ ಗೆಲುವು, ನದಿಯಂತೆ ಬಂಗಾಳದಲ್ಲಿ ನಮ್ಮ ಗೆಲುವಿಗೆ ದಾರಿ ಮಾಡಿಕೊಟ್ಟಿದೆ ಎಂದು ಮೋದಿ ಹೇಳಿದರು.

ನಿಮ್ಮ ಭರವಸೆಗಳು ನನ್ನ ಪ್ರತಿಜ್ಞೆ ಮತ್ತು ನಿಮ್ಮ ಕನಸುಗಳು ನನ್ನ ಸ್ಫೂರ್ತಿ. ಬಿಜೆಪಿಗೆ, ಪಕ್ಷದ ಕಾರ್ಯಕರ್ತರೇ ಅದರ ಶಕ್ತಿ. ಬಿಹಾರದಲ್ಲಿ ಅದ್ಭುತ ಪ್ರದರ್ಶನಕ್ಕೆ ಕಾರ್ಯಕರ್ತರೇ ಕಾರಣ ಎಂದು ಬಣ್ಣಿಸಿದರು.

ಬಂಗಾಳದ ಜನರು ತಮ್ಮ ರಾಜ್ಯದಿಂದ ‘ಜಂಗಲ್ ರಾಜ್’ ಅನ್ನು ಬೇರುಸಹಿತ ಕಿತ್ತುಹಾಕಬೇಕು. ಈ ಗೆಲುವು ಬಂಗಾಳಕ್ಕೆ ಮಾತ್ರವಲ್ಲ, ದಕ್ಷಿಣದ ನಮ್ಮ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದರು.

Share This Article