ಟೋಕಿಯೊ: ಎರಡು ದಿನಗಳ ಜಪಾನ್ (Japan) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಟೋಕಿಯೊದಿಂದ ಸೆಂಡೈಗೆ ಮೋದಿ (PM Modi) ಪ್ರಯಾಣಿಸಿದ್ದಾರೆ.
ಸೆಂಡೈಗೆ ತೆರಳುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಟೋಕಿಯೊದಲ್ಲಿ 16 ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಅಡಿಯಲ್ಲಿ ರಾಜ್ಯ-ಪ್ರಾಂತ್ಯ ಸಹಕಾರವನ್ನು ಬಲಪಡಿಸಲು ಅವರು ಕರೆ ನೀಡಿದರು. ಇದನ್ನೂ ಓದಿ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್ ಪ್ರಮುಖ ಪಾಲುದಾರ: ಮೋದಿ ಬಣ್ಣನೆ
ಬುಲೆಟ್ ಟ್ರೈನ್ ಟ್ರೇನಿಂಗ್‌ನಲ್ಲಿರುವ ಭಾರತೀಯ ಮೂಲದ ಲೊಕೊ ಪೈಲಟ್‌ಗಳನ್ನು ಭೇಟಿಯಾಗಿ ಮೋದಿ ಮಾತುಕತೆ ನಡೆಸಿದರು. ಬುಲೆಟ್ ಟ್ರೈನ್ ಕೋಚ್ ತಯಾರಿಕಾ ಘಟಕ ಇರುವ ಟೋಕಿಯೊದ ಎಲೆಕ್ಟ್ರಾನ್ ಕಾರ್ಖಾನೆ ಮತ್ತು ಸೆಂಡೈನಲ್ಲಿರುವ ಟೊಹೊಕು ಶಿಂಕನ್ಸೆನ್ ಸ್ಥಾವರಕ್ಕೂ ಮೋದಿ ಭೇಟಿ ನೀಡಲಿದ್ದಾರೆ. ಬಳಿಕ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಇದಕ್ಕೂ ಮೊದಲು ಟೋಕಿಯೊದಲ್ಲಿ, ಪ್ರಧಾನಿ ಮೋದಿ 16 ಜಪಾನಿನ ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಚರ್ಚೆ ನಡೆಸಿದರು. 15 ನೇ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ದೀರ್ಘಕಾಲೀನ ನಾಗರಿಕ ಬಾಂಧವ್ಯದ ಮೇಲೆ ನಿರ್ಮಿಸಲಾದ ಭಾರತ-ಜಪಾನ್ ಸಂಬಂಧಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ