ವಿಶೇಷ ಫೋಟೋ, ವಿಡಿಯೋದೊಂದಿಗೆ ಕಾರ್ಗಿಲ್ ವಿಜಯೋತ್ಸವ ನೆನೆದ ಮೋದಿ

Public TV
2 Min Read

ನವದೆಹಲಿ: ಇಂದು 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ದೇಶದೆಲ್ಲೆಡೆ ಹೆಮ್ಮೆಯಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಫೋಟೋಗಳು ಹಾಗೂ ವಿಡಿಯೋ ಮೂಲಕ ಕಾರ್ಗಿಲ್ ವಿಜಯೋತ್ಸವ ನೆನಪಿಸಿಕೊಂಡು ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ.

ದೇಶಕ್ಕಾಗಿ ವೀರ ಯೋಧರ ತ್ಯಾಗ ಮತ್ತು ಬಲಿದಾನ ನೆನೆದು ಅವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ 2 ದಿನ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹೆಮ್ಮೆಯ ಸಂದರ್ಭದಲ್ಲಿ ಮೋದಿ ಅವರು ತಾವು ಕಾರ್ಗಿಲ್‍ಗೆ ಭೇಟಿ ನೀಡಿ, ಅಲ್ಲಿನ ಯೋಧರ ಜೊತೆ ಕಳೆದ ಕ್ಷಣವನ್ನು ಮರೆಯಲು ಅಸಾಧ್ಯ ಎಂದು ಯೋಧರೊಂದಿಗೆ ಕಳೆದ ಕ್ಷಣದ ಕೆಲವು ವಿಶೇಷ ಫೋಟೋಗಳ ಜೊತೆ ಟ್ವೀಟ್ ಮಾಡಿ ನೆನಪನ್ನು ಹಂಚಿಕೊಂಡಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನದವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧದ ವಿಜಯವನ್ನು ಪ್ರತಿ ವರ್ಷ ಜುಲೈ 26ರಂದು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ.

ಟ್ವೀಟ್‍ನಲ್ಲಿ ಏನಿದೆ?
1999ರಲ್ಲಿ ಕಾರ್ಗಿಲ್ ಯುದ್ಧ ನಡೆದ ವೇಳೆ ನನಗೆ ಕಾರ್ಗಿಲ್‍ಗೆ ತೆರೆಳಿ, ಅಲ್ಲಿ ವೀರ ಯೋಧರನ್ನು ಭೇಟಿ ಮಾಡುವ ಅವಕಾಶ ದೊರಕಿತ್ತು. ಆ ವೇಳೆ ನಾನು ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ನನ್ನ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೆನು.

ಕಾರ್ಗಿಲ್‍ಗೆ ಭೇಟಿ ನೀಡಿದ ಕ್ಷಣ, ಅಲ್ಲಿ ಯೋಧರ ಜೊತೆ ಕಳೆದ ಸಮಯವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದು ಬರೆದು ಯೋಧರ ಜೊತೆ ಕಾರ್ಗಿಲ್‍ನಲ್ಲಿ ತೆಗೆಸಿಕೊಂಡ ಕೆಲ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನೊಂದು ಟ್ವೀಟ್‍ನಲ್ಲಿ, ಕಾರ್ಗಿಲ್ ವಿಜಯ್ ದಿನದಂದು ತಾಯಿ ಭಾರತೀಯಳ ಎಲ್ಲಾ ವೀರ ಪುತ್ರರಿಗೆ ನನ್ನ ಹೃದಯಪೂರ್ವಕ ವಂದನೆ. ಈ ದಿನ ನಮ್ಮ ಸೈನಿಕರ ಧೈರ್ಯ, ಶೌರ್ಯ ಮತ್ತು ಸಮರ್ಪಣೆಯನ್ನು ನೆನಪಿಸುತ್ತದೆ. ಈ ಸಂದರ್ಭದಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ಒಲವು ತೋರಿದ ಆ ಪ್ರಬಲ ಯೋಧರಿಗೆ ನನ್ನ ವಿನಮ್ರ ಗೌರವ, ಜೈ ಹಿಂದ್ ಎಂದು ‘ಕಾರ್ಗಿಲ್ ವಿಜಯ್ ದಿವಸ್’ ಅನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಯೋಧರಿಗಾಗಿ ವಿಶೇಷ ವಿಡಿಯೋವನ್ನು ಕೂಡ ಮೋದಿ ಅವರು ಸಮರ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *