ನವದೆಹಲಿ: ಕರುಣೆ, ವಿನಯದ ಮತ್ತು ಮಾನವಕುಲದ ಮೇಲಿನ ಅಚಲ ಸೇವೆಯ ಪ್ರತಿರೂಪವಾಗಿ ನಮ್ಮೆಲ್ಲರ ಸ್ಮರಣೆಯಲ್ಲಿ ಸದಾ ಜೀವಂತವಾಗಿರುತ್ತೀರಿ ಎಂದು ಶಿವಕುಮಾರ ಶ್ರೀಗಳ (Shivakumara Shri) ಜಯಂತಿಗೆ ಪ್ರಧಾನಿ ಮೋದಿಯವರು (PM Modi) ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
ಇಂದು ಸಿದ್ದಗಂಗಾ ಶ್ರೀಗಳ 119ನೇ ಜಯಂತಿ ಉತ್ಸವ. ಈ ಹಿನ್ನೆಲೆ ಪ್ರಧಾನಿ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪರಮ ಪೂಜ್ಯ ಡಾ. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯ ಈ ಸಂದರ್ಭದಲ್ಲಿ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ. ಅವರು ಕರುಣೆ, ವಿನಯ ಮತ್ತು ಮಾನವಕುಲದ ಮೇಲಿನ ಅಚಲ ಸೇವೆಯ ಪ್ರತಿರೂಪವಾಗಿ ನಮ್ಮೆಲ್ಲರ ಸಮೂಹ ಸ್ಮರಣೆಯಲ್ಲಿ ಸದಾ ಉಳಿದಿದ್ದಾರೆ. ಇತರರ ಉದ್ಧಾರಕ್ಕಾಗಿ ಸಮರ್ಪಿತವಾದ ಜೀವನದ ಮೂಲಕ, ನಿಜವಾದ ಮಹತ್ವ ಇತರರಿಗೆ ಸೇವೆ ಸಲ್ಲಿಸುವುದರಲ್ಲಿದೆ ಎಂದು ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ – ಸಿದ್ದಗಂಗಾ ಮಠದಲ್ಲಿ ಕಳೆಗಟ್ಟಿದ ಸಂಭ್ರಮ
ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ಣ ನಮನಗಳು. ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಅವರು ಜನರ ಸ್ಮೃತಿಯಲ್ಲಿ ನೆಲೆಸಿದ್ದಾರೆ. ಇತರರ ಏಳಿಗೆಗಾಗಿ ಮುಡಿಪಾಗಿಟ್ಟ ಜೀವನದ ಮೂಲಕ, ನಿಜವಾದ ಶ್ರೇಷ್ಠತೆಯು ಸೇವೆಯಲ್ಲಿ ಅಡಗಿದೆ ಎಂಬುದನ್ನು ಅವರು… pic.twitter.com/z3VW0kz282
— Narendra Modi (@narendramodi) April 1, 2026
ಶಿಕ್ಷಣ, ಸಾಮಾಜಿಕ ಕಲ್ಯಾಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅವರ ಅಪಾರ ಕೊಡುಗೆಗಳು ಸಮಾಜದ ಮೇಲೆ ಶಾಶ್ವತ ಗುರುತನ್ನು ಮೂಡಿಸಿವೆ. ಇಂದಿಗೂ ಅವರ ಜೀವನವು ಅನೇಕ ಜನರಿಗೆ ನಿಸ್ವಾರ್ಥತೆ ಮತ್ತು ಸೇವೆಯ ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಶ್ರೀಗಳ ಜೊತೆ ಇರುವ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

