ದೇಶದ ಅತಿದೊಡ್ಡ ಮುಂಬೈ- ದೆಹಲಿ ಎಕ್ಸ್‌ಪ್ರೆಸ್‌ವೇಗೆ ಮೋದಿ ಚಾಲನೆ

Public TV
1 Min Read

ಜೈಪುರ: ರಾಜಸ್ಥಾನ  ಚುನಾವಣೆಯ ಸನಿಹದಲ್ಲಿ ದೇಶದ ಅತಿದೊಡ್ಡ ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ವೇಯ (Delhi-Mumbai Expressway) ಮೊದಲ ಹಂತವನ್ನು ಪ್ರಧಾನಿ ಮೋದಿ (PM Narendra Modi) ಲೋಕಾರ್ಪಣೆ ಮಾಡಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1,386 ಕಿಲೋಮೀಟರ್‌ಗಳ ಎಕ್ಸ್‌ಪ್ರೆಸ್‌ ಹೈವೇಯನ್ನು ಅತ್ಯಂತ  ವೇಗವಾಗಿ ಪೂರ್ಣಗೊಳಿಸುತ್ತಿದೆ. ಇದರ ಮೊದಲ ಹಂತವಾಗಿ ಸಾಹ್ನಾ – ದೌಸಾ ಮಧ್ಯೆ ನಿರ್ಮಿಸಲಾದ ಹೆದ್ದಾರಿಯನ್ನು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಇದರಿಂದಾಗಿ ದೆಹಲಿ-ಜೈಪುರ (Delhi-Jaipur) ನಡುವಿನ ಅಂತರ ಎರಡು ಗಂಟೆಗೆ ಇಳಿದಿದೆ. ಸದ್ಯ ದೆಹಲಿಯಿಂದ ಜೈಪುರಕ್ಕೆ ತೆರಳಲು ನಾಲ್ಕರಿಂದ ಐದು ಗಂಟೆ ಹಿಡಿಯುತ್ತಿದೆ. ಈ ಎಂಟು ಲೇನ್‍ಗಳ ಸಾಹ್ನಾ -ದೌಸಾ 246 ಕಿಲೋಮೀಟರ್ ಹೆದ್ದಾರಿಯನ್ನು 10,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನೂ ಓದಿ: ʼಸುಪ್ರೀಂʼ ನಿವೃತ್ತ ನ್ಯಾಯಾಧೀಶ ಕನ್ನಡಿಗ ಅಬ್ದುಲ್‌ ನಜೀರ್‌ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕ

ರಾಜಸ್ಥಾನ-ಹರಿಯಾಣ-ಮಧ್ಯಪ್ರದೇಶ-ಗುಜರಾತ್-ಮಹಾರಾಷ್ಟ್ರ ರಾಜ್ಯಗಳನ್ನು ಈ ಎಕ್ಸ್‌ಪ್ರೆಸ್‌ವೇ ಸಂಪರ್ಕಿಸುತ್ತದೆ. 2019ರ ಮಾರ್ಚ್ 9ರಂದು ಆರಂಭಗೊಂಡಿದ್ದು ಈ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಈ ಯೋಜನೆಗೆ 5 ಸಾವಿರ ಹೆಕ್ಟೇರ್ ಭೂ ಸ್ವಾಧೀನ ಮಾಡಲಾಗಿದ್ದು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಪ್ರಯಾಣದ ಅವಧಿ 24 ಗಂಟೆಯಿಂದ 12 ಗಂಟೆಗೆ ಇಳಿಕೆಯಾಗಲಿದ್ದು ಈಗ ಇರುವುದಕ್ಕಿಂತ 180 ಕಿ.ಮೀ ಕಡಿಮೆಯಾಗಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *