ಟ್ಯಾರಿಫ್‌ ವಾರ್‌ ನಡುವೆ ಮುಂದಿನ ತಿಂಗಳು ಅಮೆರಿಕಗೆ ಮೋದಿ ಭೇಟಿ

Public TV
1 Min Read

ನವದೆಹಲಿ: ಭಾರತದ ಮೇಲೆ ಅಮೆರಿಕ (India – US) ಸುಂಕ ಸಮರ ಸಾರಿದೆ. ಈ ಹೊತ್ತಲ್ಲೇ ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಭಾಗವಹಿಸಲು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಉಭಯ ದೇಶಗಳ ನಡುವಿನ ವ್ಯಾಪಾರದ ಸಮಸ್ಯೆಗಳನ್ನು ಬಗೆಹರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಭೆ ನಡೆಸಲು ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಭಾರತದ ಮೇಲೆ 50% ಸುಂಕ ವಿಧಿಸಿದ್ದು, ರಷ್ಯಾಗೆ ದೊಡ್ಡ ಹೊಡೆತ ಕೊಟ್ಟಿದೆ: ಟ್ರಂಪ್‌

ಟ್ರಂಪ್ ಜೊತೆಗೆ ಪ್ರಧಾನಿ ಮೋದಿ, ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸೇರಿದಂತೆ ವಿದೇಶಿ ನಾಯಕರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಯುಎನ್‌ಜಿಎ ಶೃಂಗಸಭೆ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆಯಲಿದೆ. ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗುವ ವಾರದಲ್ಲಿ ಜಾಗತಿಕ ನಾಯಕರ ಆಗಮನ ಶುರುವಾಗುತ್ತದೆ.

ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದ್ದರು. ನಂತರ ಏಳು ತಿಂಗಳಲ್ಲಿ ಉಭಯ ನಾಯಕರ ಎರಡನೇ ಭೇಟಿ ಇದಾಗಲಿದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಇಬ್ಬರೂ ನಾಯಕರು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಮೋದಿ ನನ್ನ ಸ್ನೇಹಿತ ಎಂದು ಟ್ರಂಪ್‌ ಹೇಳಿಯು ಕೂಡ, ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ. ಇದನ್ನೂ ಓದಿ: ʻಇದು ಯುದ್ಧದ ಯುಗವಲ್ಲʼ – ಮೋದಿ ಸಂದೇಶ ಉಲ್ಲೇಖಿಸಿ ಅಮೆರಿಕ-ರಷ್ಯಾ ಮಾತುಕತೆಗೆ ಭಾರತ ಬೆಂಬಲ

ಭಾರತೀಯ ಉತ್ಪನ್ನಗಳ ಮೇಲಿನ ಟ್ರಂಪ್ ಅವರ 50% ಸುಂಕಗಳಲ್ಲಿ ಅರ್ಧದಷ್ಟು ಆ.7 ರಿಂದ ಜಾರಿಗೆ ಬಂದರೆ, ಉಳಿದದ್ದು ಆ.27 ರಿಂದ ಜಾರಿಗೆ ಬರಲಿವೆ. ಆ ಗಡುವಿನ ಮೊದಲು, ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ತೀವ್ರ ಮಾತುಕತೆಗಳಲ್ಲಿ ತೊಡಗಿದ್ದವು.

Share This Article