ದೇಶದ ಸಾಲ ಹೆಚ್ಚಾಗಲು ನರೇಂದ್ರ ಮೋದಿಜಿ ಕಾರಣ: ಸಿದ್ದರಾಮಯ್ಯ ಕಿಡಿ

Public TV
2 Min Read

– ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಮೋದಿಯೇ ಕಾರಣ: ಸಿಎಂ

ಬೆಳಗಾವಿ: ದೇಶದ ಸಾಲ ಹೆಚ್ಚಾಗಲು ನರೇಂದ್ರ ಮೋದಿಜಿ (Narendra Modi) ಕಾರಣ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ (Belagavi) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಮಾನ ಮಾರ್ಯಾದೆ ಎನೂ ಇಲ್ಲ. ಪೆಟ್ರೋಲ್ ಡಿಸೇಲ್ ಬೆಲೆ ಏರಿಸಿದವರು ಯಾರು? ಗ್ಯಾಸ್ ಬೆಲೆ ಏರಿಸಿದವರು ಯಾರು? ಇದಕ್ಕೆಲ್ಲ ಕಾರಣ (BJP) ಬಿಜೆಪಿಯವರು. ಮೋದಿ ಸರ್ಕಾರ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕರಗ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ನಾವು ಹಾಲಿನ ದರ ಏರಿಕೆ ಮಾಡಿರೋದು ರೈತರಿಗೆ ವರ್ಗಾವಣೆ ಮಾಡಲು. ಅದನ್ನ ರೈತರಿಗೆ ಕೊಡಬೇಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇವರು ರೈತ ವಿರೋಧಿಗಳಾ? ಗ್ಯಾಸ್‌ ಬೆಲೆ 50 ರೂ. ಹೆಚ್ಚು ಮಾಡಿದ್ದಾರೆ. ಕಚ್ಚಾತೈಲ ಬೆಲೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಬ್ಯಾರಲ್‌ಗೆ 120 ಡಾಲರ್ ಇತ್ತು. ಈಗ 65 ಡಾಲರ್ ಆಗಿದೆ. ಈಗ ಯಾಕೆ ಹೆಚ್ಚು ಮಾಡಿದ್ದಾರೆ? ಬಿಜೆಪಿಯವರಿಗೆ ನೈತಿಕತೆ ಇಲ್ಲ, ಬೆಲೆ ಏರಿಕೆ ಆಗಿರೋದು ಅವರ ಕಾಲದಲ್ಲಿ. ಕೇಂದ್ರ ಸರ್ಕಾರದ ತಪ್ಪು ನೀತಿಯಿಂದ ಬೆಲೆ ಏರಿಕೆ ಆಗಿದೆ. ಅದರ ವಿರುದ್ಧನೂ ಮಾತಾಡಿ ಎಂದು ಬಿಜೆಪಿಗರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಸಂಬಳ ಕೊಡಲು ಹಣವಿಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ, ಯಾರದಾದ್ರೂ ಸಂಬಳ ನಿಂತು ಹೋಗಿದೆಯಾ? ಬಿಜೆಪಿಯವರ ಕಾಲದಲ್ಲಿ ದುಡ್ಡಿಲ್ಲದಿದ್ರೂ ಕರೆದು ಕೆಲಸ ನೀಡಿ, ದುಡ್ಡು ಹೊಡೆದು ಹೊರಟು ಹೋದ್ರು. ಈಗ ಅವರು ನಮಗೆ ಪಾಠ ಹೇಳಿ ಕೊಡಲು ಬರುತ್ತಿದ್ದಾರೆ. ಇಂದು ಕರ್ನಾಟಕ ಆರ್ಥಿಕ ದಿವಾಳಿ ಆಗಿದ್ದರೆ ಬಿಜೆಪಿಯವರು ಕಾರಣ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಇದ್ದಾಗಲೇ ಕರ್ನಾಟಕದ ಆರ್ಥಿಕ ಸ್ಥಿತಿ ಹಾಳಗಿರೋದು.

ನಾವು ಹಿಂದಿನ ವರ್ಷಕ್ಕಿಂತ ಈ ವರ್ಷ 38ಸಾವಿರ ಕೋಟಿ ರೂ. ಹೆಚ್ಚಿನ ಬಜೆಟ್ ಮಂಡನೆ ಮಾಡಿದ್ದೇವೆ. ಆರ್ಥಿಕ ದಿವಾಳಿ ಆಗಿದ್ರೇ ಇದು ಸಾಧ್ಯ ಆಗುತ್ತಿತ್ತಾ? ನರೇಂದ್ರ ಮೋದಿಯವರು ಎಷ್ಟು ಸಾಲ ಮಾಡಿದ್ರೂ? ಮೋದಿಯವರು ಬಂದಾಗ 53 ಲಕ್ಷದ 11 ಸಾವಿರ ಕೋಟಿ ರೂ. ಸಾಲ ಇತ್ತು. ಹತ್ತು ವರ್ಷದಲ್ಲಿ 200 ಲಕ್ಷ ಕೋಟಿ ರೂ. ಸಾಲ ಆಗಿದೆ. ದೇಶದ ಮೇಲೆ ಸಾಲ ಜಾಸ್ತಿ ಆಗಲು ಕಾರಣ ಮೋದಿ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ಅಂಕಿಅಂಶ ಬಹಿರಂಗ – ಕರ್ನಾಟಕದಲ್ಲಿ ಯಾವ ಜಾತಿ ಜನಸಂಖ್ಯೆ ಎಷ್ಟಿದೆ?

Share This Article