ನಿರ್ಲಕ್ಷಕ್ಕೊಳಗಾಗಿದ್ದ ಈಶಾನ್ಯ ಭಾರತ ಈಗ ಅಭಿವೃದ್ಧಿಯ ಎಂಜಿನ್‌: ಮೋದಿ

Public TV
1 Min Read

ಐಜ್ವಾಲ್: ವೋಟ್‌ ಬ್ಯಾಂಕ್ (Vote Bank) ರಾಜಕೀಯದಿಂದ ಹಲವು ವರ್ಷಗಳಿಂದ ನಿರ್ಲಕ್ಷಕ್ಕೊಳಗಾಗಿದ್ದ ಭಾರತದ ಈಶಾನ್ಯ ಭಾಗ ಕಳೆದ 11 ವರ್ಷಗಳ ಎನ್‌ಡಿಎ ಸರ್ಕಾರದ ಆಡಳಿತದಿಂದ ಅಭಿವೃದ್ಧಿಯ ಎಂಜಿನ್ ಆಗಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಮೀಜೊರಾಂನಲ್ಲಿ (Mizoram) 9 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ, ಕೇಂದ್ರ ಸರ್ಕಾರದ ‘ಆ್ಯಕ್ಟ್ ಈಸ್ಟ್’ ಯೋಜನೆ ಮತ್ತು ಕಲಾದನ್ ಮಲ್ಟಿಮಾಡೆಲ್ ಯೋಜನೆ ಮೂಲಕ ಆಗ್ನೇಯ ಭಾರತದೊಂದಿಗೆ ಜೋಡಿಸುವ ಕೆಲಸದಲ್ಲಿ ಮೀಜೋರಾಂ ಪ್ರಮುಖ ಪಾತ್ರ ವಹಿಸಿದೆ. ಬೈರಾಬಿ-ಸಾಯ್‌ರಂಗ್ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಈ ಮೂಲಕ ದೇಶದ ರೈಲ್ವೆ ನಕ್ಷೆಗೆ ಮೀಜೊರಾಂ ಸಂಪರ್ಕಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ನೇಪಾಳ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿಗೆ ಶುಭ ಕೋರಿದ ಪ್ರಧಾನಿ ಮೋದಿ

ಈ ರೈಲ್ವೆ ಸಂಪರ್ಕದಿಂದ ಮೀಜೋರಾಂನ ಶಿಕ್ಷಣ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ರಾಜ್ಯದ ಪ್ರವಾಸೋದ್ಯಮ ಬೆಳೆಯಲಿದೆ. ಈ ಭಾಗದಲ್ಲಿ 4,500 ಸ್ಟಾರ್ಟ್‌ ಅಪ್‌ಗಳು ಆರಂಭಗೊಂಡಿವೆ. ಉದ್ಯೋಗವಕಾಶ ಹೆಚ್ಚಲಿದೆ. ಇನ್ನೂ ಹೊಸ ಜಿಎಸ್‌ಟಿಯಿಂದ ಈ ಭಾಗದ ಜನರ ಬದುಕು ಇನ್ನಷ್ಟು ಸುಧಾರಿಸಲಿದೆ. ಅಗತ್ಯ ಔಷಧಗಳು ಎಲ್ಲರಿಗೂ ತಲುಪಲಿದೆ. ವಾಹನಗಳ ಬೆಲೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿಯವರ ವೇದಿಕೆ ಕಾರ್ಯಕ್ರಮ ಲಾಮ್ಮುಲಾ ಮೈದಾನದಲ್ಲಿ ಆಯೋಜನೆಗೊಂಡಿತ್ತು. ಆದರೆ ಅತಿಯಾದ ಮಳೆಯಿಂದಾಗಿ ಐಜ್ವಾಲ್‌ನ ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದಲೇ ವರ್ಚುವಲ್ ವೇದಿಕೆ ಮೂಲಕ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಮಿಜೋರಾಂನ ಮೊಟ್ಟಮೊದಲ ರೈಲು ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

Share This Article