ಗುವಾಹಟಿ: ಚುನಾವಣಾ ಆಯೋಗವು ಎಸ್‌ಐಆರ್ ಮೂಲಕ ನುಸುಳುಕೋರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಪ್ರಯತ್ನಿಸುತ್ತಿದ್ದರೆ, ದೇಶದ್ರೋಹಿಗಳು ನುಸುಳುಕೋರರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆದಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ ಹೊಸ ಟರ್ಮಿನಲ್ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ಅಸ್ಸಾಂ ಭದ್ರತೆ ಮತ್ತು ಅಸ್ಮಿತೆಗೆ ಅಡ್ಡಿಯಾಗಿರುವ ನುಸುಳುಕೋರರನ್ನು ಕಾಂಗ್ರೆಸ್ ದಶಕದಿಂದ ರಕ್ಷಿಸಿಕೊಂಡು ಬಂದಿದೆ. ಆದರೆ, ಬಿಜೆಪಿ ಸರ್ಕಾರ ಕಾಂಗ್ರೆಸ್ ಮಾಡಿದ ತಪ್ಪನ್ನು ಮಾಡಲ್ಲ ನುಸುಳುಕೋರರ ವಿರುದ್ಧ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಘರ್ಜಿಸಿದ್ದಾರೆ.
ಇದಕ್ಕೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಯಾರು ದೇಶದಲ್ಲಿ ನುಸುಳುಕೋರರಿದ್ದಾರೆ ಅಂತ ಅವರಿಗೆ ಗೊತ್ತಿಲ್ವಾ? ಬಾರ್ಡರ್‌ನಲ್ಲಿ ಸೈನಿಕರು ಇರ್ತಾರೆ. ನಿಮ್ಮದೇ ಸರ್ಕಾರವಿದೆ. ನಿಮ್ಮ ವೈಫಲ್ಯಗಳನ್ನು ಮುಚ್ಚಲು ಇದೆಲ್ಲ ಮಾಡುತ್ತಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ.
ಮನರೇಗಾ ವಿಚಾರವಾಗಿ ಖರ್ಗೆ ಮಾತನಾಡಿ, ದೇಶದ ರೈತರು & ಕಾರ್ಮಿಕರನ್ನು ಅವರು ಕೊಲೆ ಮಾಡ್ತಿದ್ದಾರೆ. ಗಾಂಧಿ ಹೆಸರು ತೆಗೆದು ಜೀ ರಾಮ ಜೀ ಅಂತಾ ಹೆಸರು ಯಾಕಿಡ್ತಿದ್ದಾರೆ. ಇದು ಕ್ಷÄಲ್ಲಕ ರಾಜಕಾರಣ ಅಲ್ವಾ ಅಂತ ಖರ್ಗೆ ಕಿಡಿಕಾರಿದ್ದಾರೆ.

