ಶುಕ್ರವಾರದಿಂದ (ಆ.28) ಪ್ರಾರಂಭವಾಗುವ ಪ್ರಧಾನಿ ಮೋದಿಯವರ ಈ ವಿದೇಶ ಪ್ರವಾಸದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶ, ಅದರಾಚೆಗೆ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯ ಬಗ್ಗೆ ಚರ್ಚೆ ನಡೆಯಲಿದೆ.ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಬಿಗ್ ಬಾಸ್ ಸ್ಪರ್ಧಿ
ಪ್ರಧಾನಿ ಭೇಟಿಯ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಪ್ರಧಾನಿ ಮೋದಿಯವರು ಆ.28ರ ಸಂಜೆ ಜಪಾನ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಆ.29 ಮತ್ತು 30ರಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಹಲವು ಕಾರಣಗಳಿಗಾಗಿ ಪ್ರಮುಖ ಭೇಟಿಯಾಗಿದೆ. ಪ್ರಧಾನಿ ಮೋದಿಯವರು ಹಾಗೂ ಪ್ರಧಾನಿ ಇಶಿಬಾ ಅವರೊಂದಿಗೆ ನಡೆಸುತ್ತಿರುವ ಮೊದಲ ವಾರ್ಷಿಕ ಶೃಂಗಸಭೆ ಇದಾಗಿದೆ. ಸುಮಾರು 7 ವರ್ಷಗಳಲ್ಲಿ ಜಪಾನ್ ಜೊತೆಗಿನ ಮೊದಲ ಏಕವ್ಯಕ್ತಿ ಭೇಟಿಯಾಗಿದೆ. ಅವರು ಕೊನೆಯ ಬಾರಿಗೆ 2018ರಲ್ಲಿ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡಿದ್ದರು. 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಜಪಾನ್‌ಗೆ ಪ್ರಧಾನಿ ಮೋದಿಯವರ ಎಂಟನೇ ಭೇಟಿಯಾಗಿದೆ. ಇದೇ ವೇಳೆ ಜಪಾನ್‌ನ ಇತರ ಹಲವಾರು ರಾಜಕೀಯ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದವನ್ನೂ ನಡೆಸಲಿದ್ದಾರೆ. ಈ ಸಂವಾದಗಳು ಎರಡೂ ದೇಶಗಳ ನಡುವಿನ ಪ್ರಮುಖ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಗಾಢವಾಗಿಸುವ ಗುರಿಯನ್ನು ಹೊಂದಿವೆ.
ಪ್ರಧಾನಿ ಮೋದಿ ಆ.31 ಮತ್ತು ಸೆ.1ರಂದು ಶಾಂಘೈ ಸಹಕಾರ ಮಂಡಳಿ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಸಭೆಗಾಗಿ ಚೀನಾದ ಟಿಯಾಂಜಿನ್‌ಗೆ ಭೇಟಿ ನೀಡಲಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಮೋದಿ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. SCO ದಲ್ಲಿ ಭಾರತವನ್ನು ಹೊರತುಪಡಿಸಿ 10 ಸದಸ್ಯರನ್ನು ಹೊಂದಿದೆ. ಬೆಲಾರಸ್, ಚೀನಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಇದರಲ್ಲಿ ಸೇರಿವೆ.
ಟಿಯಾಂಜಿನ್‌ನಲ್ಲಿ ನಡೆಯಲಿರುವ ಮುಂಬರುವ 25ನೇ SCO ಶೃಂಗಸಭೆಯ ಕಾರ್ಯಕ್ರಮವು ಆ.31ರ ಸಂಜೆ ಸ್ವಾಗತ ಔತಣಕೂಟವನ್ನು ಒಳಗೊಂಡಿದೆ ಮತ್ತು ಮುಖ್ಯ ಶೃಂಗಸಭೆಯು ಸೆ.1ರಂದು ನಡೆಯಲಿದೆ. SCO ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ಕೆಲವು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ `ಬಿಗ್’ ಸರ್‌ಪ್ರೈಸ್