ಮನುಷ್ಯರಂತೆ ವರ್ತಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ- ‘ಪುಷ್ಪ’ ನಟಿ ಅನಸೂಯಾ

Public TV
2 Min Read

ಟಾಲಿವುಡ್ (Tollywood) ಸ್ಟಾರ್ ನಟ ವಿಜಯ್ ದೇವರಕೊಂಡ ಬಗ್ಗೆ ಅದ್ಯಾವಾಗ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಎದುರು ಮಾಡಿದ್ರೋ ಅಂದಿನಿಂದ ವಿಜಯ್ ಫ್ಯಾನ್ಸ್ ನಟಿಯ ಹಿಂದೆ ಬಿದ್ದಿದ್ದಾರೆ. ಬಿಟ್ಟು ಬಿಡದೇ ಆಕೆಯನ್ನ ಟ್ರೋಲ್ (Troll) ಮಾಡ್ತಿದ್ದಾರೆ. ಇತರೆ ವಿಚಾರಗಳಿಗೆ ನಟಿಯ ಹೆಸರನ್ನು ಬಳಸಿಕೊಳ್ತಿದ್ದಾರೆ. ಕಿಡಿಗೇಡಿಗಳ ಕಾಟ ತಾಳಲಾರದೇ ನಟಿ ಮೌನ ಮುರಿದಿದ್ದಾರೆ. ನನಗೂ ಒಂದು ಕುಟುಂಬವಿದೆ. ನನ್ನನ್ನೂ ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ನಿರೂಪಕಿ ಅನಸೂಯಾ ಕೋರಿದ್ದಾರೆ. ಇದನ್ನೂಓದಿ:ಹೆಣ್ಣು ಮಗುವಿನ ತಂದೆಯಾದ ನಟ ರಾಮ್ ಚರಣ್

ತೆಲುಗು ಕಿರುತೆರೆಯಲ್ಲಿ ಉತ್ತಮ ನಿರೂಪಕಿ, ನಟಿಯಾಗಿ ಗಮನ ಸೆಳೆದವರು ಅನಸೂಯಾ ಭಾರದ್ವಾಜ್. ಇತ್ತೀಚಿನ ಅಲ್ಲು ಅರ್ಜುನ್, ರಶ್ಮಿಕಾ ನಟನೆಯ ‘ಪುಷ್ಪ’ (Pushpa) ಚಿತ್ರದಲ್ಲಿ ಅನಸೂಯಾ ಪ್ರಮುಖ ನಟಿಸಿದ್ದರು. ರಗಡ್ ಪಾತ್ರಕ್ಕೆ ನಟಿ ಜೀವತುಂಬಿದ್ದರು. ಇನ್ನೂ ಈ ಹಿಂದೆ ‘ಅರ್ಜುನ್ ರೆಡ್ಡಿ’ (Arjun Reddy) ಚಿತ್ರದಲ್ಲಿ ತಾಯಿ (Mother) ಬಗ್ಗೆ ಬೈಗುಳ ಇದೆ. ಇದರ ವಿರುದ್ಧ ಅನಸೂಯಾ ಧ್ವನಿ ಎತ್ತಿದ್ದರು. ವಿಜಯ್ ದೇವರಕೊಂಡ ವಿರುದ್ಧ ಅವರು ಕಿಡಿಕಾರಿದ್ದರು. ಇದನ್ನು ವಿಜಯ್ ಫ್ಯಾನ್ಸ್ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅನಸೂಯಾ ಅವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಇದೀಗ ನಟಿ, ಸರಣಿ ಟ್ವೀಟ್ ಮೂಲಕ ರಿಯಾಕ್ಟ್ ಮಾಡಿದ್ದಾರೆ.

ಎಲ್ಲರಿಗೂ ನಮಸ್ಕಾರ. ಕಳೆದ ಕೆಲವು ದಿನಗಳಿಂದ ನನ್ನ ಬಗ್ಗೆ ಸಾಕಷ್ಟು ಟ್ವೀಟ್‌ಗಳನ್ನು ನೋಡುತ್ತಿದ್ದೇನೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರಿಗೆ ಅಗೌರವ ತೋರಲು ನನ್ನ ಹೆಸರನ್ನು ಬಳಸಲಾಗುತ್ತಿದೆ. ಇದನ್ನು ಮಾಡುತ್ತಿರುವುದರಿಂದ ನನ್ನ ಗೌರವಕ್ಕೆ ಧಕ್ಕೆ ಬರುತ್ತಿದೆ ಎಂದು ಮೊದಲ ಟ್ವೀಟ್‌ನಲ್ಲಿ ಅನಸೂಯಾ ಹೇಳಿದ್ದಾರೆ. ಇದು ನನ್ನ ಹೆಸರಿಗೆ ಮಾನಹಾನಿ ಮಾಡುತ್ತಿದೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಿಂದ ಅನಗತ್ಯ ನೋವು ಉಂಟಾಗುತ್ತಿದೆ. ಇದು ನನ್ನ ಜೀವನ. ನನ್ನ ಇಷ್ಟದಂತೆ ಮುನ್ನಡೆಸುತ್ತಿದ್ದೇನೆ. ಅಲ್ಲದೆ ನಾನು ಯಾರ ಬಳಿಗೂ ಹೋಗಲು ಬಯಸುವುದಿಲ್ಲ. ನನ್ನ ಬಲದಿಂದ ನಾನು ಬೆಳೆದಿದ್ದೇನೆ ಎಂದಿದ್ದಾರೆ ಅವರು.

ಬಡಾಯಿ ಕೊಚ್ಚಿಕೊಳ್ಳಲು ನನ್ನ ಬಳಿ ಯಾವುದೇ ವಿಶೇಷ PR ತಂಡಗಳಿಲ್ಲ. ನನ್ನ ಬಗ್ಗೆ ನೀವು ಮೆಚ್ಚುಗೆ ಸೂಚಿಸಲು ಸಾಧ್ಯವಾಗದೇ ಇದ್ದರೆ ಕನಿಷ್ಠ ನನ್ನಿಂದ ದೂರವಿರಿ. ಸಂಬಂಧವಿಲ್ಲದ ವಿಷಯಗಳಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ. ದಯವಿಟ್ಟು ಮನುಷ್ಯರಂತೆ ವರ್ತಿಸಿ. ನನಗೊಂದು ಕುಟುಂಬವಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ ಎಂದು ಅನಸೂಯಾ ಮನವಿ ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಅನಸೂಯಾ ಅವರು ತಮ್ಮ ವಿವಾಹ ವಾರ್ಷಿಕೋತ್ಸವನ್ನ ಪತಿ ಜೊತೆ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ರು. ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ಮಿಂಚಿದ್ದರು. ನಟಿಯ ಈ ಲುಕ್ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು.

Share This Article