ರಷ್ಯಾ ಆಕ್ರಮಣದಿಂದ ನಾಶವಾದ ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ

Public TV
2 Min Read

ಕೀವ್: ರಷ್ಯಾ-ಉಕ್ರೇನ್ (Russia Ukraine War) ಯುದ್ಧದಲ್ಲಿ ರಷ್ಯಾಪಡೆಗಳಿಂದ ನಾಶವಾದ ವಿಶ್ವದ ಅತಿದೊಡ್ಡ ವಿಮಾನವನ್ನು (Biggest Plane) ಮರುನಿರ್ಮಾಣ ಮಾಡಲು ಉಕ್ರೇನ್ ಚಿಂತನೆ ನಡೆಸಿದೆ.

ಉಕ್ರೇನ್ ಭಾಷೆಯಲ್ಲಿ `ಮ್ರಿಯಾ ಡ್ರೀಮ್’ (Mriya dream) ಎಂದು ಕರೆಯಲ್ಪಡುವ 2ನೇ ಆಂಟೊನೊವ್ ಆನ್ -225 ಕಾರ್ಗೊ ವಿಮಾನದ ವಿನ್ಯಾಸ ಕಾರ್ಯವೂ ಆರಂಭವಾಗಿದೆ. ಈ ಕುರಿತು ಆಂಟೊನೊವ್ ಕಂ (Antonov Co) ತನ್ನ ಫೇಸ್‌ಬುಕ್ ಪುಟದಲ್ಲಿ ತಿಳಿಸಿದೆ. ರಷ್ಯಾದೊಂದಿಗಿನ ಯುದ್ಧವು ಕೊನೆಗೊಂಡ ನಂತರ ಇದರ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇದು ಯುದ್ಧದ ಸಮಯ ಅಲ್ಲ: ರಷ್ಯಾ ಭೇಟಿ ವೇಳೆ ಪುನರುಚ್ಚರಿಸಿದ ಜೈಶಂಕರ್

ಈ ದೈತ್ಯ ವಿಮಾನದ ದುರಸ್ತಿ ಕಾರ್ಯ ನಡೆಯುತ್ತಿದ್ದಾಗಲೇ ರಷ್ಯಾದ ಆಕ್ರಮಣದಿಂದ ಮತ್ತೆ ಅಡಚಣೆಯಾಯಿತು. 88 ಮೀಟರ್ (290 ಅಡಿ) ದೈತ್ಯ ರೆಕ್ಕೆಗಳನ್ನು ಹೊಂದಿರುವ ಈ ವಿಮಾನದ ಮರುನಿರ್ಮಾಣಕ್ಕೆ ಕನಿಷ್ಠ 500 ಮಿಲಿಯನ್ ಡಾಲರ್ (USD) (40 ಸಾವಿರ ಕೋಟಿ) ವೆಚ್ಚವಾಗಲಿದೆ ಎಂದು ಆಂಟೊನೊವ್ ಅಂದಾಜಿಸಿದ್ದು, ಕನಿಷ್ಠ 5 ವರ್ಷ ಸಮಯ ಬೇಕಾಗಲಿದೆ ಎಂದು ಹೇಳಿದೆ. ಇದನ್ನೂ ಓದಿ: ಮಾವಿನ ಬೀಜ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

ರಷ್ಯಾ ಆಕ್ರಮಣದಿಂದಾಗಿ ಸತತ ಆರ್ಥಿಕ ಒತ್ತಡಕ್ಕೆ ಸಿಲುಕಿರುವ ಉಕ್ರೇನ್ ಈಗಾಗಲೇ ಇಂಧನ ಮೂಲ ಸೌಕರ್ಯ ಹಾಗೂ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಉಕ್ರೇನ್ ದ್ಯತ್ಯ ವಿಮಾನ ನಿರ್ಮಾಣ ಮಾಡಲು ಉಕ್ರೇನ್ ಮುಂದಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *