ಶಿವಮೊಗ್ಗವನ್ನ ಮತ್ತೊಂದು ಪಾಕಿಸ್ತಾನ ಮಾಡಲು ಸಂಚು ಮಾಡಿದ್ದಾರೆ: ಸಿ.ಟಿ ರವಿ

Public TV
1 Min Read

ಬೆಂಗಳೂರು: ಶಿವಮೊಗ್ಗವನ್ನು (Shivamogga) ಮತ್ತೊಂದು ಪಾಕಿಸ್ತಾನ (Pakistan) ಮಾಡಲು ಸಂಚು ಮಾಡಿದ್ದಾರೆ. ಇದನ್ನ ಖಂಡಿಸುತ್ತೇನೆ. ಕೋಮು ಶಕ್ತಿಗಳನ್ನು ರಾಜಕೀಯವಾಗಿ ಬಳಸಿಕೊಂಡು ವಿಭಜನೆ ಮಾಡಲು ಪ್ರಯತ್ನ ನಡೀತಿದೆ. ಇಂತಹ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕು ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ (CT Ravi) ಕರೆ ನೀಡಿದ್ದಾರೆ.

ಶಿವಮೊಗ್ಗದ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದ ಘಟನೆ ದುರಾದೃಷ್ಟಕರ. ಅಮಾಯಕರನ್ನು ಗುರಿಯಾಗಿಸಿಕೊಂಡು ಗಲಭೆ ಉಂಟು ಮಾಡಬೇಕೆಂಬ ಉದ್ದೇಶ ಪೂರ್ವಯೋಜಿತ ಘಟನೆ ಅನ್ನೋದು ಸ್ಪಷ್ಟವಾಗಿದೆ. ಶಿವಮೊಗ್ಗ ಜಿಲ್ಲೆ ಸೂಕ್ಷ್ಮ ಜಿಲ್ಲೆಯಾಗಿದೆ. ಇದು ಗೊತ್ತಿದ್ದೂ ಅಲ್ಲಿ ಹಿಂದೂಗಳ ಮಾರಣ ಹೋಮ ನಡೆಸಿದವನ ಆರಾಧನೆಗೆ, ಪ್ರತಿಕೃತಿ ಹಾಕುವುದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರು ಯಾಕೆ ಅವಕಾಶ ಕೊಟ್ರು? ಶಿವಮೊಗ್ಗದಲ್ಲಿ ನಡೆದಿದ್ದು ಈದ್ ಮೀಲಾದೋ? ಟಿಪ್ಪು ಜಯಂತಿಯೋ? ಔರಂಗಜೇಬ್ ಜಯಂತಿಯೋ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗ್ತಿದೆ, ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ: ವೇದವ್ಯಾಸ್ ಕಾಮತ್

ಟಿಪ್ಪು, ಔರಂಗಜೇಬ್ ಹಿಂದೂಗಳ ಮಾರಣ ಹೋಮ ನಡೆಸಿದವರು. ಟಿಪ್ಪು ಮೈಸೂರು ಒಡೆಯರ್ ಆಡಳಿತ ಒತನ ಮಾಡಿದವನು. ಕನ್ನಡ ಭಾಷೆಯ ಬದಲು, ಪರ್ಶಿಯನ್ ಭಾಷೆ ಆಡಳಿತ ಭಾಷೆಯಾಗಿ ಹೇರಿದವನು. ಅವನನ್ನು ವಿಜೃಂಭಿಸಲು ಅವಕಾಶ ಕೊಟ್ಟಿದ್ದಾರೆ. ಅಲ್ಲದೇ ಹಾಡಹಗಲೇ ತಲ್ವಾರ್ ಹಿಡಿದು ಬೆದರಿಸುವ ಕೆಲಸ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ, ಅಲ್ಲಿ ಹಾಕಿದ್ದ ಜಿಹಾದ್ ಬರವಣಿಗೆಗಳು ಇವೆಲ್ಲವೂ ಪ್ರಚೋದಿಸುವ ಸಂಗತಿಗಳೇ ಆಗಿವೆ. ಇದೆಲ್ಲವನ್ನೂ ಮೊದಲೇ ಜಿಲ್ಲಾಡಳಿತ ತೆರವು ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್