ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

Public TV
1 Min Read

ಕಠ್ಮಂಡು: ನೇಪಾಳ ವಿಮಾನ ಪತನಗೊಡ ಸ್ಥಳದಲ್ಲಿ ಇದುವರೆಗೂ 16 ಮೃತದೇಹ ಪತ್ತೆಯಾಗಿದ್ದು, ಉಳಿದ 6 ಶವಗಳಿಗಾಗಿ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಮುಸ್ತಾಂಗ್ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಷೆ ನದಿಯ ಸಮೀಪ 14,500 ಅಡಿ ಎತ್ತರದಲ್ಲಿ ಪರ್ವತದ ತುದಿಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ. ಮೃತದೇಹಗಳನ್ನು ಹೊರತೆಗೆಯಲು 15 ನೇಪಾಳ ಸೇನೆಯ ಸೈನಿಕರ ತಂಡವು ಸ್ಥಳದಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ನೇಪಾಳದ ಗೃಹ ಸಚಿವಾಲಯದ ವಕ್ತಾರ ಫಡಿಂದ್ರ ಮಣಿ ಪೋಖ್ರೆಲ್ ಮಾತನಾಡಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿಯಲು ಸಾಧ್ಯವಿಲ್ಲ. ಆದರೆ ಅಧಿಕೃತ ಹೇಳಿಕೆ ಬರಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಪತ್ತೆಯಾದ ವಿಮಾನ 6 ಗಂಟೆಗಳಲ್ಲಿ ಪತ್ತೆ – ಸಾವು ನೋವಿನ ಬಗ್ಗೆ ತನಿಖೆ

ಅಪಘಾತದ ಸ್ಥಳದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮೃತದೇಹಗಳನ್ನು ತರಲು ಹೋದ ಹೆಲಿಕಾಪ್ಟರ್ ಅಲ್ಲಿಗೆ ಇಳಿಯಲು ಸಾಧ್ಯವಾಗಲಿಲ್ಲ. ಆದರೂ ಎಲ್ಲಾ ಮೃತ ದೇಹಗಳನ್ನು ನೇರವಾಗಿ ಕಠ್ಮಂಡುವಿಗೆ ತರಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೇವಲ ಮತ ಬ್ಯಾಂಕ್‍ಗೋಸ್ಕರ ಸಿದ್ದರಾಮಯ್ಯ ಭಯೋತ್ಪಾದಕರ ಕಾಲು ನೆಕ್ಕುತ್ತಿದ್ದಾರೆ: ಕಟೀಲ್

Share This Article
Leave a Comment

Leave a Reply

Your email address will not be published. Required fields are marked *