ಚಿಕ್ಕಬಳ್ಳಾಪುರ: ಜ್ಯೂಸ್ ಬಾಟಲಿಯೊಳಗೆ ವಿಷ ಮಿಶ್ರಣ ಮಾಡಿಕೊಂಡು ಸೇವಿಸಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಎರಡು ಮಕ್ಕಳ ತಾಯಿ ಪ್ಲಾನ್ ಮಾಡಿಕೊಂಡಿದ್ದು, ಅದೃಷ್ಟವಶಾತ್ ಇಬ್ಬರು ಹೆಣ್ಣು ಮಕ್ಕಳು ಪಾರಾಗಿ, ತಾಯಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿ (Manchenahalli) ತಾಲೂಕಿನ ಮಿಣಕನಗುರ್ಕಿ ಗ್ರಾಮದ ಬಳಿ ನಡೆದಿದೆ.
36 ವರ್ಷದ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. 8 ವರ್ಷ ಹಾಗೂ 15 ವರ್ಷದ ಹೆಣ್ಣುಮಕ್ಕಳು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಅಂದಹಾಗೆ ಮೂಲತಃ ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ ಲಕ್ಷ್ಮೀ ಎಂಬಾಕೆ ನಾರಾಯಣ ಎಂಬವರ ಜೊತೆ ಎರಡನೇ ವಿವಾಹವಾಗಿ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ಆದರೆ ಅದೇನು ಸಮಸ್ಯೆಯೋ ಏನೋ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದಳು. ಇದನ್ನೂ ಓದಿ: ಡ್ರಗ್ ಪೆಡ್ಲರ್‌ಗಳ ಜೊತೆಗೆ ಪೊಲೀಸರ ನಂಟು ಆರೋಪ – ಇನ್‌ಸ್ಪೆಕ್ಟರ್ ಸೇರಿ 11 ಪೊಲೀಸರು ಸಸ್ಪೆಂಡ್
ಸೀದಾ ಸಿಂಗನಾಯಕನಹಳ್ಳಿಯಿಂದ ಹಿರಿಯ ಮಗಳು ವ್ಯಾಸಂಗ ಮಾಡುತ್ತಿರುವ ಮಂಚೇನಹಳ್ಳಿ ತಾಲೂಕಿನ ಹನುಮಂತಪುರ ಗ್ರಾಮದ ಬಳಿಯ ವಸತಿ ಶಾಲೆಗೆ ಬಂದು ಮಗಳನ್ನ ಕಳುಹಿಸುವಂತೆ ಶಿಕ್ಷಕರ ಬಳಿ ಕೇಳಿಕೊಂಡಿದ್ದಾಳೆ. ಆದರೆ ಪರೀಕ್ಷೆಗಳು ಸಮೀಪ ಇದೆ, ಮಗಳನ್ನ ಕಳುಹಿಸಲು ಆಗಲ್ಲ ಎಂದು ಶಿಕ್ಷಕರು ಹೇಳಿದ್ದು, ಮಗಳಿಗೆ ಬಿರಿಯಾನಿ ತಿನ್ನಿಸಿ ಚೆನ್ನಾಗಿ ಒದಿಕೊಳ್ಳುವಂತೆ ಹೇಳಿ ಅಲ್ಲಿಂದ ಕಿರಿಯ ಮಗಳ ಜೊತೆ ವಾಪಸ್ ಆಗಿದ್ದಾಳೆ. ದಾರಿ ಮಧ್ಯೆ ಮಿಣಕನಗುರ್ಕಿ ಬಳಿ ಜ್ಯೂಸ್ ಬಾಟಲಿಗೆ ವಿಷ ಬೆರೆಸಿ ತಾನೂ ಕುಡಿದು ಕಿರಿಯ ಮಗಳಿಗೂ ಕೊಟ್ಟಿದ್ದಾಳೆ. ಆದರೆ ಮಗಳು ಕುಡಿದಿಲ್ಲ. ಇನ್ನೂ ವಿಷ ಸೇವನೆಗೂ ಮುನ್ನ ತನ್ನ ಅಕ್ಕನಿಗೆ ಕರೆ ಮಾಡಿ ಹಿರಿ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಾಳೆ. ಗಂಡ ನಾರಾಯಣ್‌ಗೆ ಮಗಳು ಹಾಗೂ ಆಕೆ ಬಾಯ್ ಮಾಡುವ ವೀಡಿಯೋ ಮಾಡಿ ಕೊನೆಯ ಸಂದೇಶ ಕಳುಹಿಸಿದ್ದಾಳೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ – ಜನಸಾಗರ, ಡಿಜೆ ಸದ್ದಿಗೆ ಯುವ ಸಮೂಹ ಭರ್ಜರಿ ಡ್ಯಾನ್ಸ್
ಇನ್ನೂ ವಿಷ ಕುಡಿದು ವಿಲವಿಲ ಒದ್ದಾಡುತ್ತಿದ್ದ ತಾಯಿಯನ್ನ ಕಂಡು ಮಗು ರಸ್ತೆಗೆ ಬಂದು ರಕ್ಷಣೆ ಮಾಡುವಂತೆ ಅಂಗಲಾಚಿಕೊಂಡಿದ್ದಾಳೆ, ರಸ್ತೆಗೆ ಅಡ್ಡ ಬಂದು ಗಾಡಿಗಳನ್ನು ಅಡ್ಡ ಹಾಕಲು ಪ್ರಯತ್ನಿಸಿ ಕೊನೆಗೆ ಆಟೋಗೆ ಅಡ್ಡಲಾಗಿ ನಿಂತು ತಾಯಿಯನ್ನ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀ ಸಾವನ್ನಪ್ಪಿದ್ದಾಳೆ. ಇಬ್ಬರು ಮಕ್ಕಳು ತಾಯಿಯಿಲ್ಲದ ತಬ್ಬಲಿಗಳಾಗದ್ದಾರೆ. ಮತ್ತೊಂದೆಡೆ ಗಂಡ ದಿನೇಶ್ ಮೊದಲನೇ ಹೆಂಡತಿ ಸಹ ಸೂಸೈಡ್ ಮಾಡಿಕೊಂಡಿದ್ದಳಂತೆ. ಈಗ ಎರಡನೇ ಹೆಂಡತಿ ಸಹ ಸೂಸೈಡ್ ಮಾಡಿಕೊಂಡಿದ್ದಾಳೆ. ಸಂಬಂಧಿಕರು ಹೊಟ್ಟೆನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಕ್ತರಿಗೆ ಸಿಹಿಸುದ್ದಿ; ಮಾದಪ್ಪನ ದರ್ಶನಕ್ಕೆ ತಿರುಪತಿ ಮಾದರಿ ವ್ಯವಸ್ಥೆ