ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ

Public TV
2 Min Read

-ಜನಪ್ರಿಯತೆಯ ಹಳಿ ಮೇಲೆ ಸಾಗುತ್ತಾ ಮೋದಿ ಲೆಕ್ಕ?

ನವದೆಹಲಿ: ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಮೋದಿ ಸರ್ಕಾರದ ಕೊನೇ ಬಜೆಟ್ ಇದಾಗಿದ್ದು, ಈ ಬಾರಿ ಭರಪೂರ ಘೋಷಣೆ ಬಜೆಟ್‍ನಲ್ಲಿ ಹೊರಬೀಳುವ ಸಾಧ್ಯತೆ ಇದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಪಿಯೂಶ್ ಗೋಯಲ್ ಮೊದಲ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ ಅಧಿವೇಶನ ಪ್ರಾರಂಭವಾಗಲಿದ್ದು, ಪಿಯೂಶ್ ಗೋಯೆಲ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಪಂಚ ಸಮರದಲ್ಲಿ ಸೋತ ಬೆನ್ನಲ್ಲೇ ಲೋಕಸಮರ ಬೇರೆ ಬರ್ತಿರೋದ್ರಿಂದ ಮತದಾರರನ್ನು ಓಲೈಸಲು ಸಹಜವಾಗಿಯೇ ಈ ಬಜೆಟ್ ಜನಪ್ರಿಯತೆಯ ಹಳಿ ಮೇಲೆ ಸಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲೇ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಘೋಷಿಸಿಸದಂತೆ ಈ ಬಜೆಟ್ ರೈತ ಬಜೆಟ್ ಆಗಲಿದೆ ಎನ್ನಲಾಗ್ತಿದೆ. ರೈತರನ್ನು, ಗ್ರಾಮೀಣ ಭಾರತೀಯರನ್ನು, ಮಧ್ಯಮ ವರ್ಗದವರನ್ನು ಓಲೈಸೋ ದೃಷ್ಟಿಯಿಂದ ಹಲವು ಜನಪ್ರಿಯ ಘೋಷಣೆಗಳನ್ನು ಇಂದು ಮಧ್ಯಂತರ ಬಜೆಟ್‍ನಲ್ಲಿ ಮಾಡಲಾಗುತ್ತದೆ ಎನ್ನಲಾಗಿದೆ. ಆರ್ಥಿಕ ಶಿಸ್ತನ್ನು ಕಾಪಾಡುವ ಹೊಣೆಯೂ ಪಿಯೂಶ್ ಅವರ ಮೇಲಿದೆ.

ಪಿಯೂಶ್ ಬಜೆಟ್ ಪ್ರಮುಖವಾಗಿ ಮೂರು ಭಾಗಗಳನ್ನು ಒಳಗೊಂಡಿರುತ್ತದೆ. ಮೊದಲನೇ ಭಾಗದಲ್ಲಿ ಅಯವ್ಯಯದ ಹೇಳಿಕೆ, ಎರಡನೇ ಭಾಗದಲ್ಲಿ ಏಪ್ರಿಲ್‍ನಿಂದ ಜುಲೈವರೆಗೆ ಮಾಡಬೇಕಾದ ಖರ್ಚಿನ ಬಗ್ಗೆ ವೋಟ್‍ಆನ್ ಅಕೌಂಟ್. ಮೂರನೇ ಭಾಗ ಮೋದಿ ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆ ಮತ್ತು ಭವಿಷ್ಯದ ಬಗೆಗೆ ಇರಲಿದೆ ಎನ್ನಲಾಗಿದೆ. ಇನ್ನು ಬಜೆಟ್ ಅವಧಿಯನ್ನು ಕ್ಯಾಲೆಂಡರ್ ವರ್ಷಕ್ಕೆ ಬದಲಿಸುವ ಸಾಧ್ಯತೆಯೂ ಇದೆ.

ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಮತ್ತೊಮ್ಮೆ ದೇಶದ ಜನತೆ ಮೋದಿಯವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಬಜೆಟ್‍ನಲ್ಲಿ ದೇಶದ ರಕ್ಷಣೆ, ರೈತಾಪಿ ವರ್ಗ, ನೌಕರರ ಪರ, ಅಭಿವೃದ್ಧಿಪರ ಯೋಜನೆಗಳು ಘೋಷಣೆಯಾಗಾಲಿವೆ. ಅಲ್ಲದೇ ಹಿಂದಿನ ಬಜೆಟ್‍ನಲ್ಲಿ ರಾಜ್ಯಕ್ಕೆ ಘೋಷಣೆ ಮಾಡಿದ ಎಲ್ಲ ಯೋಜನೆಗಳನ್ನು ಮೋದಿ ಸರ್ಕಾರ ಪೂರ್ಣಗೊಳಿಸಿದೆ. ಕಾವೇರಿ-ಗೋದಾವರಿ ನದಿ ನೀರು ಜೋಡಣೆ ಯೋಜನೆ ನಿರೀಕ್ಷೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮೋದಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಒಂದ್ಕಡೆ ಅಂದ್ಕೊಂಡ ರೀತಿಯಲ್ಲಿ ಜಿಎಸ್‍ಟಿ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಆಗ್ತಿಲ್ಲ. ಇನ್ನೊಂದ್ಕಡೆ ನಿರುದ್ಯೋಗ ಪ್ರಮಾಣ ಹೆಚ್ಚಳ. ಈ ಸಮಸ್ಯೆಗಳ ನಡುವೆ ಲೋಕಸಭೆ ಚುನಾವಣೆ ಬಂದಿರೋದು ಕೇಂದ್ರಕ್ಕೆ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲೇ ಬಜೆಟ್ ಮಂಡನೆ ಮಾಡೋದು ಆರ್ಥಿಕ ಸಚಿವರಿಗೆ ಅಗ್ನಿ ಪರೀಕ್ಷೆ ಆಗಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *