ಪೈರಸಿ ಒಂದು ವೈರಸ್, ತಡೆಯವುದು ಕಷ್ಟ: ಸುಮಲತಾ ಅಂಬರೀಶ್

Public TV
1 Min Read

ಮಂಡ್ಯ: ಪೈರಸಿ ಒಂದು ವೈರಸ್, ತಡೆಯವುದು ಕಷ್ಟ ಎಂದು ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೈರಸಿಯನ್ನು ಗೂಂಡಾ ಕಾಯ್ದೆಯಡಿ ತಂದು ತಮಿಳುನಾಡು ಯಶಸ್ವಿಯಾಗಿದೆ. ಪೈರಸಿ ಒಂದು ವೈರಸ್, ತಡೆಯವುದು ಕಷ್ಟ. ಆದರೆ ಪೈರಸಿ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಡಿಸೆಂಬರ್ 31 ರಂದು ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಮಸ್ಯೆಗೆ ಪರಿಹಾರ ಸಿಗುವುದಾದರೆ ಬಂದ್ ಮಾಡಬೇಕು. ಬಂದ್‍ನಿಂದ ಯಾರಿಗೆ ಉಪಯೋಗ? ಯಾರಿಗೆ ನಷ್ಟ ಅನ್ನೋದನ್ನ ಯೋಚನೆ ಮಾಡಬೇಕು. ವಿಚಾರಗಳ ಪರ ನಿಂತಾಗ ಕೆಲವೊಮ್ಮೆ ತ್ಯಾಗ ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು

ಬಂದ್‍ನಿಂದ  ಖಂಡಿತ ನಷ್ಟವಾಗುತ್ತದೆ. ಬಂದ್‍ನಿಂದ ಕೇವಲ ಸಿನಿಮಾ ಚಿತ್ರರಂಗಕ್ಕೆ  ಮಾತ್ರ ನಷ್ಟವಲ್ಲ. ಹೊಸ ವರ್ಷದ ವೇಳೆ ವ್ಯಾಪಾರಗಳು ಹೆಚ್ಚಾಗಿರುತ್ತದೆ. ಅಂದು ಬಂದ್ ಮಾಡಿದರೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದು ನುಡಿದರು.

ಮಾನವೀಯತೆ ಇಂದ ಯೋಚನೆ ಮಾಡಬೇಕು. ಡಿಸೆಂಬರ್ 31 ರಂದೇ ಬಂದ್ ಮಾಡಬೇಕಾ ಅಥವಾ ಸರ್ಕಾರ ಏನು ಕ್ರಮವಹಿಸಿದ್ದಾಗ ಬಂದ್ ಮಾಡಬೇಕಾ ಯೋಚಿಸಬೇಕು. ಬಂದ್‌ಗೆ ನನ್ನ ಬೆಂಬಲ ಅಲ್ಲ, ಹೋರಾಟಕ್ಕೆ ನನ್ನ ಬೆಂಬಲ ಎಂದರು. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ

ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮತಾಂತರ ನಿಷೇಧ ಕಾಯ್ದೆ ಬಗ್ಗೆ ತಿಳಿದು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಎಮ್‌ಇಎಸ್ ಪುಂಡಾಟಿಕೆ ಬಗ್ಗೆ ಮಾತನಾಡಲು ಶೂನ್ಯ ಅವಧಿಯಲ್ಲಿ ಮಾತನಾಡಲು ಮನವಿ ಮಾಡಿದ್ದೆ. ಆದರೆ ಈ ಬಾರಿ ಶೂನ್ಯ ಅವಧಿ ನಡೆಯಲಿಲ್ಲ. ಹೀಗಾಗಿ ಈ ವಿಷಯ ಕುರಿತು ಗೃಹಸಚಿವರಿಗೆ ಪತ್ರ ಬರೆಯುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *