ಇಟಲಿಗೆ ಹೋಗಿ 263 ಭಾರತೀಯರನ್ನ ಸುರಕ್ಷಿತವಾಗಿ ಕರೆತಂದ ಪೈಲಟ್ ಸ್ವಾತಿ

Public TV
2 Min Read

ಗಾಂಧಿನಗರ: ಚೀನಾ ಬಳಿಕ ಕೊರೊನಾ ವೈರಸ್‍ನಿಂದ ಹೆಚ್ಚು ಜನ ಸಾವನ್ನಪ್ಪಿರುವ ದೇಶ ಇಟಲಿ. ಈ ದೇಶಕ್ಕೆ ಹೋಗಲು ಪ್ರತಿಯೊಬ್ಬರು ಭಯಪಡುತ್ತಿದ್ದಾರೆ. ಆದರೆ ಇದೀಗ ಇದೇ ದೇಶಕ್ಕೆ ಪೈಲಟ್ ಸ್ವಾತಿ ರಾವಲ್ ಹೋಗಿ ಇಟಲಿಯಲ್ಲಿ ಸಿಲುಕಿದ್ದ 263 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬಂದಿದ್ದಾರೆ.

ಸ್ವಾತಿ ರಾವಲ್ ಮೂಲತಃ ಗುಜರಾತ್‍ನ ನಿವಾಸಿ, ಇವರು ಸುರಕ್ಷಿತವಾಗಿ 263 ಮಂದಿ ಭಾರತೀಯರನ್ನು ಕರೆದುಕೊಂಡು ಬಂದಿರುವು ಹೆಮ್ಮೆಪಡುವ ವಿಚಾರವಾಗಿದೆ. ದಿನದಿಂದ ದಿನಕ್ಕೆ ಮಾರಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಇಡೀ ದೇಶ ಲಾಕ್‍ಡೌನ್ ಆಗಿದೆ. ಪರಿಣಾಮ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ವಿಮಾನಯಾನವನ್ನು ರದ್ದು ಪಡಿಸಿದೆ.

ವಿಮಾನ ರದ್ದು ಮಾಡಿದ ಪರಿಣಾಮ ಅನೇಕ ವಿದ್ಯಾರ್ಥಿಗಳು ಸೇರಿದಂತೆ ಹಲವು ಭಾರತೀಯರು ಇಟಲಿಯ ರೋಮ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಆಗ ಅವರ ಕುಟುಂಬವರು ಇಟಲಿಯಲ್ಲಿ ಸಿಲುಕಿದವರನ್ನು ವಾಪಸ್ ಕರೆತರಲು ಸಹಾಯ ಮಾಡುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ ಒಪ್ಪಿದ ಸರ್ಕಾರ ಪೈಲಟ್ ಸ್ವಾತಿ ಅವರಿಗೆ ಭಾರತೀಯರನ್ನು ಕರೆದುಕೊಂಡು ಬರುವಂತೆ ಹೇಳಿದೆ. ಇದಕ್ಕೆ ತಕ್ಷಣ ಸ್ವಾತಿ ಒಪ್ಪಿಕೊಂಡು ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.

ಮಗಳ ಕೆಲಸದ ಬಗ್ಗೆ ಮಾತನಾಡಿದ ತಂದೆ ಎಸ್.ಡಿ.ರಾವಲ್ “ಮಾರ್ಚ್ 21 ರಂದು ನನ್ನ ಮಗಳ ನನಗೆ ಫೋನ್ ಮಾಡಿದ್ದಳು. ಆಗ 22 ಜನರ ಸಿಬ್ಬಂದಿಯೊಂದಿಗೆ ನಾನು ಇಟಲಿಗೆ ಹೋಗಬೇಕೆಂದು ಕೇಳಿದಳು. ತಕ್ಷಣ ನಾನು ಏಕೆ ಎಂದು ಕಾರಣ ಕೇಳಿದೆ, ಅದಕ್ಕೆ ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆದುಕೊಂಡು ಬರಬೇಕು. ಹೀಗಾಗಿ ಸಿಬ್ಬಂದಿ ಜೊತೆ ಹೋಗಲು ಅನುಮತಿ ಕೇಳಿದಳು. ತಕ್ಷಣ ನಾನು ಒಪ್ಪಿಗೆ ನೀಡಿದೆ” ಎಂದು ಹೇಳಿದ್ದಾರೆ.

ನಾನು ಅರಣ್ಯ ಅಧಿಕಾರಿ, ಹೀಗಾಗಿ ಸರ್ಕಾರಿ ಕೆಲಸ ಹೇಗೆ ಎಂಬುದು ನನಗೆ ಗೊತ್ತಿದೆ. ಸ್ವಾತಿ ರೋಮ್ ವಿಮಾನ ನಿಲ್ದಾಣಕ್ಕೆ ಹೋದಾಗ ಎಲ್ಲ ಪ್ರಯಾಣಿಕರು ಸಿದ್ಧರಾಗಿದ್ದರು. ತಕ್ಷಣ ಎಲ್ಲರನ್ನು ವಿಮಾನ ಹತ್ತಿಸಿಕೊಂಡು ದೆಹಲಿಗೆ ಕರೆದುಕೊಂಡು ಬಿಟ್ಟಿದ್ದಾಳೆ. ಈ ವೇಳೆ ನನ್ನ ಮಗಳ ಬಗ್ಗೆ ಚಿಂತೆ ಮಾಡುತ್ತಿದ್ದೆ. ಆದರೆ ನನ್ನ ಮಗಳು ಉಳಿದ ಸಿಬ್ಬಂದಿ ಜೊತೆ ಎಲ್ಲರನ್ನು ಸುರಕ್ಷಿತವಾಗಿ ಧೈರ್ಯದಿಂದ ಕರೆದುಕೊಂಡು ಬಂದಿದ್ದಾಳೆ. ನಿಜಕ್ಕೂ ನನ್ನ ಮಗಳ ಕಾರ್ಯ ನನಗೆ ತುಂಬಾ ಹೆಮ್ಮೆ ತಂದಿದೆ ಎಂದು ಸಂತಸದಿಂದ ಮಾತನಾಡಿದ್ದಾರೆ.

ಸ್ವಾತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ರಾಯ್ ಬರೇಲಿಯಲ್ಲಿ ವಾಣಿಜ್ಯ ಪೈಲಟ್ ಆಗಿ ತರಬೇತಿ ಪಡೆದಿದ್ದು, 2006 ರಿಂದ ಏರ್ ಇಂಡಿಯಾದ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *