ದೈವದ ವೇಷ ತೊಟ್ಟು ದೊಂಬರಾಟ ಮಾಡೋರಿಗೆ ಹುಚ್ಚು ಹಿಡಿಸುತ್ತೇನೆ: ದೈವಾರಾಧಕರಿಗೆ ಪಿಲ್ಚಂಡಿ ಅಭಯ

Public TV
1 Min Read

ಮಂಗಳೂರು: ದೈವದ ವೇಷ ತೊಟ್ಟು ದೊಂಬರಾಟ ಮಾಡುವವರಿಗೆ ಹುಚ್ಚು ಹಿಡಿಸುತ್ತೇನೆಂದು ದೈವಾರಾಧಕರಿಗೆ ಪಿಲ್ಚಂಡಿ ದೈವ (Pilichandi Daiva) ಅಭಯ ನೀಡಿದೆ.

ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶನವಾದ ಹಿನ್ನೆಲೆ ಅನೇಕರು ಅನುಕರಣೆ ಮಾಡುತ್ತಿದ್ದಾರೆ. ದೈವಾರಾಧನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೈವಗಳ ಅಪಹಾಸ್ಯವಾಗುತ್ತಿದೆ ಎಂದು ದೈವದ ಮುಂದೆ ಭಕ್ತೆ ರೂಪಶ್ರೀ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: `ಕಾಂತಾರ’ ನೋಡಿ ಹುಚ್ಚಾಟ ಪ್ರದರ್ಶನ – ವಿಡಿಯೋ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ

ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ರೂಪಶ್ರೀ, ದೈವಗಳ ಅಪಹಾಸ್ಯ ತಡೆಯಲು ಹೋದ ನಮಗೆ ಅಪಹಾಸ್ಯ ಮಾಡುತ್ತಿದ್ದಾರೆ. ನಮಗಾದ ನೋವನ್ನ ಪೆರಾರ ಕ್ಷೇತ್ರದ ದೈವಗಳ ಮುಂದೆ ತೋಡಿಕೊಂಡಿದ್ದೇವೆ. ನಾವು ಬೇಡಿಕೊಂಡಾಗ ದೈವ ನಮಗೆ ಅಭಯದ ನುಡಿ ನೀಡಿದೆ ಎಂದು ತಿಳಿಸಿದರು.

‘ಏನು ಬೇಕಾದರೂ ಆಗಲಿ, ನೀವು ಮುಂದುವರೆಯಿರಿ. ನಿಮ್ಮ ಬೆನ್ನ ಹಿಂದೆ ನಾನಿದ್ದೇನೆ’ ಎಂದು ದೈವ ನುಡಿ ನೀಡಿದೆ. ‘ಯಾರು ದೈವಗಳ ವೇಷ ತೊಟ್ಟು ದೊಂಬರಾಟ ಮಾಡುತ್ತಾರೋ ಅವರಿಗೆ ಹುಚ್ಚು ಹಿಡಿಸುತ್ತೇನೆ. ಇಲ್ಲವಾದಲ್ಲಿ ಒಳ್ಳೆ ಬುದ್ಧಿ ನೀಡಿ ಸರಿ ದಾರಿಯಲ್ಲಿ ನಡೆಸುತ್ತೇನೆ’ ಎಂದು ದೈವ ಹೇಳಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಮೋಹನ್‍ಲಾಲ್ ಅಭಿನಯದ ವೃಷಭ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಈಗೀಗ ಮಹಿಳೆಯರು ದೈವ ಬಂದಂತೆ ವರ್ತಿಸುತ್ತಾರೆ. ತುಳುನಾಡಿನ ಇತಿಹಾಸದಲ್ಲಿ ಈ ರೀತಿ ಕಂಡ ಕಂಡಲ್ಲಿ ದೈವ ಬರುವಂತಹ ಪದ್ಧತಿ ಇಲ್ಲ. ಪವಿತ್ರ ಕ್ಷೇತ್ರಗಳಲ್ಲಿ ಹಾಗೂ ದೈವ ಅವಾಹನೆಗೆ ಅದರದ್ದೇ ನಿಯಮಗಳು ಇದೆ ಎಂದರು.

Share This Article