ಬಳ್ಳಾರಿಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ ಟಗರು ಸಿನಿಮಾದ ಶೂಟಿಂಗ್- ಫೋಟೋಗಳಲ್ಲಿ ನೋಡಿ

Public TV
1 Min Read

ಬಳ್ಳಾರಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ `ಟಗರು’ ಸಿನಿಮಾದ ಒಂದು ಹಾಡಿನ ಚಿತ್ರೀಕರಣದ ಶೂಟಿಂಗ್ ಹೊಸಪೇಟೆಯ ನಗರದ ಜೋಳದ ರಾಶಿ ಗುಡ್ಡದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಶಿವರಾಜ್‍ಕುಮಾರ್ ಹಾಗೂ ಕೆಂಡಸಂಪಿಗೆ ನಟಿ ಮಾನ್ವಿತಾ `ಟಗರು’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನೃತ್ಯ ಸಂಯೋಜಕ ಎ. ಹರ್ಷರ ಕೊರಿಯೋಗ್ರಫಿ ಮಾಡಿರುವ `ವೋಲ್ಡಾನ್ ವೋಲ್ಡಾನ್’ ಹಾಡಿಗೆ ಶಿವಣ್ಣ ಹಾಗೂ ಮಾನ್ವಿತಾ ಅವರು ಹೆಜ್ಜೆ ಹಾಕಿದ್ದಾರೆ. ಮಾನ್ವಿತಾ ಲಂಬಾಣಿ ವಸ್ತ್ರವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದು, ಲಂಬಾಣಿ ಮಹಿಳೆಯರೊಂದಿಗೆ ನೃತ್ಯ ಮಾಡುವ ದೃಶ್ಯವನ್ನು ಚಿತ್ರೀಕರಣ ಮಾಡಲಾಯಿತು.

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ, ಸುಶೀಲ ನಗರ ಮತ್ತು ಮರಿಯಮ್ಮನಹಳ್ಳಿ ಸೇರಿದಂತೆ ಕೆಲವು ತಾಂಡಾದಲ್ಲಿ ಸುಮಾರು 150 ಕ್ಕೂ ಹೆಚ್ಚು ಲಂಬಾಣಿ ಮಹಿಳೆಯರು ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿಕೊಂಡು ವೋಲ್ಡಾನ್ ವೋಲ್ಡಾನ್ ಹಾಡಿಗೆ ನೃತ್ಯ ಮಾಡುವಂತಹ ಸನ್ನಿವೇಶಗಳ ಚಿತ್ರೀಕರಣ ನಡೆಯಿತು. ಬೆಂಗಳೂರಿನಿಂದ ಸುಮಾರು 15-20 ಜನ ಸಹ ನೃತ್ಯ ಕಲಾವಿದೆಯರು ಒಂದೇ ಮಾದರಿಯ ಉಡುಪುಗಳನ್ನು ಧರಿಸಿ ಹಾಡಿನಲ್ಲಿ ನೃತ್ಯ ಮಾಡುವ ಸನ್ನಿವೇಶಗಳು ಸಹ ಇಲ್ಲಿ ಚಿತ್ರೀಕರಿಸಲಾಗಿದೆ.

ಗುರುವಾರ ನಗರದ ಉಕ್ಕಡಕೇರಿಯ ಗರಡಿ ಮನೆಯಲ್ಲಿ ಚಿತ್ರದಲ್ಲಿ ಖಳನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನಂಜಯ ಮತ್ತು ವಶಿಷ್ಟ ಸಿಂಹ ಅವರ ನಡುವಿನ ಸಂಭಾಷಣೆಯ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಕಾಕ್ರೋಚ್ ಎಂಬ ಖಳನಟನನ್ನು ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಿದ ವಿಷಯ ತಿಳಿದ ಖಳನಾಯಕ ಧನಂಜಯ ಹಾಗೂ ವಶಿಷ್ಟ ಸಿಂಹ ಮೃತದೇಹಗಳನ್ನು ನೋಡಲು ಬರುವಂತಹ ದೃಶ್ಯಗಳನ್ನು ನಗರದ ಉಕ್ಕಡಕೇರಿ ಗರಡಿ ಮನೆಯ ಸಮೀಪದಲ್ಲಿ ಮತ್ತು ನಗರದ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಚಿತ್ರೀಕರಿಸಲಾಯಿತು.

ಆಸ್ಪತ್ರೆಯಲ್ಲಿ ಖಳನಾಯಕರಾದ ಧನಂಜಯ, ವಶಿಷ್ಟ ಸಿಂಹ ಅವರೊಂದಿಗೆ ನಟಿಯರಾದ ಮಾನ್ವಿತಾ ಮತ್ತು ಅರ್ಪಿತಾ ಜೊತೆಗೆ ನಡೆಯುವ ಕೆಲ ಸಂಭಾಷಣೆಗಳ ತುಣುಕುಗಳ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಚಿತ್ರೀಕರಣವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದಾರೆ.

ಇದನ್ನು ಓದಿ: ಉಡುಪಿಯಲ್ಲಿ ಶಿವರಾಜ್ ಕುಮಾರ್ ಟೈಗರ್ ಡಾನ್ಸ್: ವಿಡಿಯೋ ನೋಡಿ

Share This Article
Leave a Comment

Leave a Reply

Your email address will not be published. Required fields are marked *