ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಇದರೊಂದಿಗೆ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಸತತ 12ನೇ ಭಾಷಣ ಮಾಡಿದರು. ‘ನಯಾ ಭಾರತ್’ (ನವ ಭಾರತ) ಘೋಷವಾಕ್ಯದೊಂದಿಗೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪ್ರಧಾನಿ ಮೋದಿಯವರನ್ನ ಸರ್ಕಾರಿ ಮತ್ತು ಸೇನಾಧಿಕಾರಿಗಳು ಬರಮಾಡಿಕೊಳ್ಳುವ ಮೂಲಕ ಸಮಾರಂಭ ಶುರುವಾಯಿತು. ಬಳಿಕ ಸೇನಾ ಗೌರವ ವಂದನೆ ಸ್ವೀಕಾರ ನಡೆಯಿತು. ಅಲ್ಲದೇ ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಸಲುವಾಗಿ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯನ್ನ ಇಲ್ಲಿ ಸ್ಮರಿಸಲಾಯಿತು. ಈ ಸಂಭ್ರಮದ ಕ್ಷಣ ಫೋಟೋದಲ್ಲಿ ಸೆರೆಯಾಗಿರುವುದನ್ನು ನೀವು ಕಾಣಬಹುದು.