ವೈರಲ್ ಆಯ್ತು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಫೋಟೋ

Public TV
1 Min Read

ಪುನೀತ್ ರಾಜ್ ಕುಮಾರ್ ನಿಧನದ ನಂತರ ಆ ಕುಟುಂಬ ಮತ್ತು ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದು ಪುನೀತ್ ಪತ್ನಿ ಅಶ್ವಿನಿ ಅವರು. ಅಪ್ಪು ಬದುಕಿದ್ದಾಗಲೇ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಮತ್ತು ಆಡಿಯೋ ಕಂಪೆನಿಗಳ ವ್ಯವಹಾರವನ್ನು ಅಶ್ವಿನಿ ಅವರೇ ನೋಡಿಕೊಳ್ಳುತ್ತಿದ್ದರು. ಇದೀಗ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಪುನೀತ್ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿನವೂ ಹೊಸ ಹೊಸ ನಿರ್ದೇಶಕರನ್ನು ಭೇಟಿ ಮಾಡುತ್ತಲೇ ಇರುತ್ತಾರಂತೆ ಅಶ್ವಿನಿ.

ಹೊಸ ಸಿನಿಮಾಗಳ ತಯಾರಿ, ಸಿನಿಮಾ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಶ್ವಿನಿ ಅವರು ಬೆಂಗಳೂರಿನ ಗಾಂಧಿನಗರದಲ್ಲಿರುವ ತಮ್ಮ ಆಫೀಸಿಗೆ ನಿತ್ಯವೂ ಬರುತ್ತಾರೆ. ಆ ಆಫೀಸಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಡಾ.ರಾಜ್ ಕುಟುಂಬದ ಅಭಿಮಾನಿಗಳು ‘ಸೊಸೆ ಆಫ್ ಪಾರ್ವತಮ್ಮ’ ಟ್ಯಾಗ್ ಲೈನ್ ನಲ್ಲಿ ಆ ಫೋಟೋವನ್ನು ವೈರಲ್ ಮಾಡಿದ್ದಾರೆ. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

ಡಾ.ರಾಜ್ ಕುಮಾರ್ ಅವರ ಶಕ್ತಿಯಾಗಿ ನಿಂತುಕೊಂಡು ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಸಿನಿಮಾಗಳನ್ನು ಮಾಡಿದರು ಪಾರ್ವತಮ್ಮ ರಾಜ್ ಕುಮಾರ್. ಕನ್ನಡ ಸಿನಿಮಾಗಳಿಗೆ ಒಂದು ಘನತೆ ತಂದುಕೊಟ್ಟರು. ಪುನೀತ್ ರಾಜ್ ಕುಮಾರ್ ಅವರಿಗೂ ಅಶ್ವಿನಿ ಅವರು ಶಕ್ತಿಯಾಗಿಯೇ ನಿಂತುಕೊಂಡು ಪಿ.ಆರ್.ಕೆ ಪ್ರೊಡಕ್ಷನ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸಿದರು. ಹೀಗಾಗಿ ಪಾರ್ವತಮ್ಮನವರನ್ನು ಅಶ್ವಿನಿ ಅವರಲ್ಲಿ ಕಾಣುತ್ತಿದ್ದಾರೆ ಅಭಿಮಾನಿಗಳು.

Live Tv

Share This Article
Leave a Comment

Leave a Reply

Your email address will not be published. Required fields are marked *