PFI ಮೊದಲಿನಿಂದಲೂ ಕೂಡ ಬ್ರೈನ್ ವಾಶ್ ಸಂಸ್ಥೆನೇ: ಚಕ್ರವರ್ತಿ ಸೂಲಿಬೆಲೆ

Public TV
3 Min Read

ಬೆಂಗಳೂರು: ಪಿಎಫ್‍ಐ (PFI) ಮೊದಲಿನಿಂದಲೂ ಕೂಡ ಬ್ರೈನ್ ವಾಶ್ ಸಂಸ್ಥೆನೇ. ಹಿಂದೂಗಳ ವಿರುದ್ಧ ಮುಸಲ್ಮಾನರನ್ನ ವಿಶೇಷವಾಗಿ ತರುಣರನ್ನು ಎತ್ತಿಕಟ್ಟುವುದಕ್ಕೆ ದೊಡ್ಡ ಪ್ರಯತ್ನ ಮಾಡುತ್ತಿದೆ. ಪಿಎಫ್‍ಐ ಸಂಘಟನೆ ಬರೀ ಹಿಂದೂಗಳಿಗೆ ಅಷ್ಟೇ ಆಘಾತಕಾರಿ ಅಲ್ಲ, ಸ್ವತಃ ಮುಸಲ್ಮಾನರಲ್ಲಿ ಇರುವಂತಹ ಬೇರೆ ಬೇರೆ ಜಾತಿಗಳಿಗೂ ತೊಂದರೆ ಉಂಟು ಮಾಡುತ್ತಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮುಸಲ್ಮಾನರಲ್ಲಿ ಬೇರೆ ಬೇರೆ ಜಾತಿಗಳು ಇವೆ, ಅದು ನಮಗೆ ಗೊತ್ತಿದೆ. ಅದರಲ್ಲಿ ಪಿಎಫ್‍ಐ ಇದೆ. ಉಗ್ರವಾದಿ ಚಿಂತನೆ ಹೊಂದಿರುವ ಪಂಗಡಕ್ಕೆ ಸೇರಿದೆ. ಇದು ಬೇರೆ ಪಂಗಡಗಳಿಂದ ಯಾರು ಮೈಂಡರ್ ಕಮ್ಯೂನಿಟಿ ಇದ್ದಾರೋ ಅದು ಸೂಫಿ ಇರಬಹುದು. ಸೂಫಿ (Sufi) ತರಹದ ಕಮ್ಯೂನಿಟಿ ಮತ್ತು ಬಸ್ಮಾಂಡಗಳು ಮುಸಲ್ಮಾನರು ದಲಿತರು ಯಾರು ಇದ್ದಾರೋ ಅವರನ್ನ ಕನ್ವರ್ಟ್ ಮಾಡುತ್ತಾರೆ. ಹಾಗಾಗಿ ಕೆಲ ಮುಸಲ್ಮಾನರು ಪಿಎಫ್‍ಐ ಅನ್ನು ವಿರೋಧ ಮಾಡ್ತಾರೆ ಎಂದರು.

ಪಿಎಫ್‍ಐ ಅಂತಹ ಸಂಘಟನೆಗಳನ್ನ ಬಳಸಿಕೊಂಡು ತರುಣರನ್ನ ಪ್ರಚೋದಿಸ್ತಾ ಇದ್ದಾರೆ. ಭಾರತದಲ್ಲಿ ಮೈನಾರಿಟಿ ಕಮ್ಯೂನಿಟಿಗೆ ತೊಂದರೆ ಇದೆ ಅಂತಾ ಬುದ್ಧಿ ಜೀವಿಗಳು, ಲೆಫ್ಟಿಸ್ಟ್ ಹೇಳ್ತಾರೆ. ಜಿನೋಸೈಡ್ ಪುಸ್ತಕದ ಮೂಲಕ ಅನೇಕ ತರುಣರ ತಲೆಗೆ ತುಂಬುವ ಪ್ರಯತ್ನ ಮಾಡುತ್ತಾ ಇದೆ. ಇದಕ್ಕೋಸ್ಕರನೇ ಪಿಎಫ್ ಐ ಬ್ಯಾನ್ ಆಗಬೇಕು ಅಂತಾ ಆಪೇಕ್ಷೆ ಇದ್ದಿದ್ದು, ಹಿಂದೂ ಮುಸಲ್ಮಾನರು ಆರಾಮಾಗಿ ಬದುಕುತ್ತಾ ಇದ್ದಾರೆ. ಆರಾಮಾಗಿ ಬದುಕುವ ಜಾಗದಲ್ಲಿ ಪಿಎಫ್‍ಐ ಹುಳಿ ಹಿಂಡುತ್ತಾ ಇತ್ತು. ಸರ್ಕಾರದ ಬ್ಯಾನ್ ಮಾಡಿ ಎಚ್ಚರಿಕೆ ನೀಡಿದೆ. ಪಿಎಫ್‍ಐ ವಿರುದ್ಧ ಇನ್ನಷ್ಟು ಪ್ರೂಫ್ ಹೊರಗೆ ಬರುತ್ತವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಇಂದಲ್ಲ ನಾಳೆ ಆಂತರಿಕ ಯುದ್ಧ ಶತಸಿದ್ಧ- ಇಂತಿಫದಾ ಬಗ್ಗೆ ಮುತಾಲಿಕ್ ಎಚ್ಚರಿಕೆ

ಪಿಎಫ್ ಐ ಮೇಲಿನ ಕೇಸ್ ಸಿದ್ದರಾಮಯ್ಯ ವಾಪಸ್ ಪಡೆದಿರೋ ದಾಖಲೆ ಬಿಡುಗಡೆ ಮಾಡಿರೋ ವಿಚಾರದ ಕುರಿತು ಮಾತನಾಡಿ, ಈ ವಿಚಾರವಾಗಿ ಸಿದ್ದರಾಮಯ್ಯನವರಿಗೆ ಎರಡು ನಾಲಿಗೆ ಇರೋದನ್ನ ನಾನು ಯಾವತ್ತೋ ಖಂಡಿಸಿದ್ದೇನೆ. ರಾಷ್ಟ್ರದ ವಿಚಾರದಲ್ಲಿ ಸಿದ್ದರಾಮಯ್ಯನವರು ರಾಷ್ಟದ ಜೊತೆಗೆ ನಿಲ್ಲಬೇಕಾಗುತ್ತೆ. ಆದರೆ ಸಿದ್ದರಾಮಯ್ಯನವರು ಯಾವತ್ತೂ ಹಾಗೇ ನಿಲ್ಲೋದಿಲ್ಲ. ಜಾತಿ ಜಾತಿ ಹೆಸರಲ್ಲಿ ಡಿವೈಡ್ ಮಾಡಿ ಮತಗಳನ್ನ ಸೆಳೆದುಕೊಳ್ಳೋದಕ್ಕೆ ಏನು ಬೇಕೋ ಅದನ್ನ ಮಾಡ್ತಾ ಇದ್ದಾರೆ. ಸಿದ್ದರಾಮಯ್ಯನವರಿಗೆ ಪಿಎಫ್‍ಐ ಒಂದು ದಾಳ. 2016 ರಲ್ಲಿ ಕೇರಳದಲ್ಲಿ ಕಾಂಗ್ರೆಸ್ (Congress) ಪಿಎಫ್ ಐ ಬ್ಯಾನ್ ಮಾಡಬೇಕು ಅನ್ನುತ್ತೆ. ಇಲ್ಲಿ ಪಿಎಫ್‍ಐ ಮೇಲಿನ ಕೇಸ್ ಗಳನ್ನ ವಾಪಸ್ ಪಡೆಯುತ್ತಾರೆ. ಒಂದು ಕಡೆ ಬ್ಯಾನ್ ಮಾಡಬೇಕು ಅಂತಾ ಕಾಂಗ್ರೆಸ್ ಎಂದರು.

ಸರ್ಕಾರ ಹೇಳುತ್ತೆ ಮತ್ತೊಂದು ಕಡೆ ಕಾಂಗ್ರೆಸ್ ಸರ್ಕಾರ ಕೇಸ್ ವಾಪಸ್ ಪಡೆಯುತ್ತೆ. ಈ ಕೇಸ್ ವಾಪಸ್ ಪಡೆದ ದಾಖಲೆಗಳನ್ನ ಬಿಜೆಪಿ (BJP) ಬಿಡುಗಡೆ ಮಾಡಿದೆ. ಥ್ಯಾಂಕ್ಸ್ ಗಾಡ್, ಈಗಲಾದರೂ ಬಿಜೆಪಿ ಎಚ್ಚೆತ್ತುಕೊಂಡಿದೆ ಇದು ಆಗಬೇಕಾಗಿರೋ ಕೆಲಸ. ಸಿದ್ದರಾಮಯ್ಯನವರು ಪಿಎಫ್‍ಐಗಾಗಿ ಏನೇನು ಮಾಡಿದ್ರು ಉಳಿಸಿಕೊಳ್ಳೋದಕ್ಕೆ ಏನೇನು ಮಾಡಿದ್ರು ಅದೆಲ್ಲ ಹೊರಗೆ ಬರಬೇಕು. ಇದೆಲ್ಲ ಹೊರಗೆ ಬಂದರೆ ಪಿಎಫ್‍ಐ ಮಾಡಿರುವ ಎಲ್ಲಾ ಕುಕೃತ್ಯ ರಾಷ್ಟ್ರ ಇರಬಹುದು, ರಾಜ್ಯ ಇರಬಹುದು ಇದೆಲ್ಲದಕ್ಕೂ ಸೂತ್ರದಾರ ಸಿದ್ದರಾಮಯ್ಯ ಅನ್ನೋದು ಗೊತ್ತಾಗಬೇಕಾದ್ರೆ ಎಲ್ಲಾ ಹೊರಗಡೆ ಬರಬೇಕು. ದೇಶ ವಿರೋಧಿಯಲ್ಲಿ ಸಿದ್ದರಾಮಯ್ಯನವರ ಪಾತ್ರ ಏನಿದೆ ಅಂತಾ ಗೊತ್ತಾಗಬೇಕಾಗಿದೆ. 175 ಕೇಸ್ ಅಲ್ಲ ಹೊಸದಾಗಿ ಆದ ಮರ್ಡರ್ ಗಳ ಬಗ್ಗೆ ತನಿಖೆ ಆಗಬೇಕು. ಕೇಸ್ ವಾಪಸ್ ಪಡೆಯೋದಕ್ಕೆ ಏನೆಲ್ಲ ಆಮಿಷ ಒಡ್ದಿದ್ದರು ಅಂತಾ ತನಿಖೆ ಮಾಡಿದ್ರೆ ಹೊರಗೆ ಬರುತ್ತೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *