ಬೆಂಗಳೂರು: ಇವತ್ತು ಭಾನುವಾರ. ಆದರೂ ರಾಜ್ಯಾದ್ಯಂತ ಪೆಟ್ರೋಲ್ ಸಿಗುತ್ತೆ. ಇಂದಿನಿಂದ ಪ್ರತಿ ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ಮಾಲೀಕರು ಹಿಂದೆ ಸರಿದಿದ್ದಾರೆ.
ಮೇ 17ರಂದು ಮುಂಬೈನಲ್ಲಿ ತೈಲ ಕಂಪನಿಗಳ ಜೊತೆಗೆ ಮಾತುಕತೆ ನಡೆಯಲಿದೆ. ಕಮಿಷನ್ ಹೆಚ್ಚಳ, ಡೀಲರ್‍ಗಳಿಗೆ ಹೆಚ್ಚಿನ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳ ಜಾರಿಗೆ ಬಂಕ್ ಮಾಲೀಕರು ಆಗ್ರಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ರಜೆ ಘೋಷಿಸಿ ಸೋಮವಾರ ಬೆಳಗ್ಗೆ 9ರಿಂದ 6 ಗಂಟೆವರೆಗೆ ಮಾತ್ರ ಬಂಕ್ ಓಪನ್ ಮಾಡಲು ತೀರ್ಮಾನಿಸಿದ್ದರು. ಆದ್ರೆ ಬುಧವಾರ ಮುಂಬೈನಲ್ಲಿ ಸಂಧಾನ ಸಭೆ ನಡೆಯೋ ಕಾರಣ ತಾತ್ಕಾಲಿಕವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರೋದಾಗಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.