ಬುದ್ದಿ ಹೇಳಲು ಬಂದವರಿಗೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ

Public TV
1 Min Read

ಯಾದಗಿರಿ: ತನ್ನ ಸಂಸಾರ ಸರಿಪಡಿಸಿಕೊಳ್ಳುವಂತೆ ಬುದ್ದಿ ಹೇಳಲು ಬಂದ ನಾಲ್ವರಿಗೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಘಟನೆಯಲ್ಲಿ ನಾಗಪ್ಪ ಎಂಬವರು ಮೃತಪಟ್ಟಿದ್ದು, ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: 16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ

crime

ಏನಿದು ಗಂಡ-ಹೆಂಡತಿ ಜಗಳ? – ಹುಣಸಗಿ ತಾಲೂಕಿನ ನಾರಾಯಣಪುರದ ನಿವಾಸಿ ಶರಣಪ್ಪ ಹಾಗೂ ಪತ್ನಿ ಹುಲಿಗೆಮ್ಮ ಇಬ್ಬರು ಹಲವು ಪ್ರತಿದಿನ ಜಗಳವಾಡುತ್ತಿದ್ದರು. ಹುಲಿಗೆಮ್ಮ ತವರು ಮನೆಯವರೊಂದಿಗೆ ತನ್ನ ಸಂಕಟ ಹೇಳಿಕೊಳ್ಳುತ್ತಿದ್ದಳು.

ದಿನವೂ ಗಂಡನೊಂದಿಗೆ ಜಗಳವಾಡುತ್ತಿದ್ದರಿಂದ ಬೇಸತ್ತು ಹುಲಿಗಮ್ಮ 14 ತಿಂಗಳಿನಿಂದ ಬೇರೆಡೆ ಮನೆ ಮಾಡಿಕೊಂಡು ವಾಸವಾಗಿದ್ದರು. ಲಿಂಗಸೂರಿನ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕಲ್ ಕೆಲಸ ಮಾಡಿಕೊಂಡಿದ್ದರು. ವಿಚ್ಛೇದನ ಕೇಳಿದರೂ ಶರಣಪ್ಪ ನಿರಾಕರಿಸಿದ್ದನು. ಸಮಸ್ಯೆಯನ್ನು ಬಗೆಹರಿಸಲೇಬೇಕೆಂದು ಹೆಂಡತಿ ತವರು ಮನೆಯವರಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಇಬ್ಬರು ಹಾಗೂ ಸರೂರಿನ ಸಿದ್ರಾಮಪ್ಪ, ಮುತ್ತಪ್ಪ ಅವರು ಶರಣಪ್ಪನಿಗೆ ಬುದ್ದಿ ಹೇಳಲು ಬಂದಿದ್ದರು. ಇದನ್ನೂ ಓದಿ: ಕನ್ನಯ್ಯಲಾಲ್ ಹತ್ಯೆ ಘೋರ, ಖಂಡನೀಯ: ಬಿ.ಕೆ.ಹರಿಪ್ರಸಾದ್

ಮನೆಗೆ ಬಂದು ಬುದ್ದಿ ಮಾತು ಹೇಳಲು ಮುಂದಾದ ಕೂಡಲೇ ಬಾಗಿಲು ಹಾಕಿಕೊಂಡ ಶರಣಪ್ಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ನಾಗಪ್ಪ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಮೂವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ.

ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ವೇದಮೂರ್ತಿ ತಿಳಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *