ಸಿಎಂ ವಿರುದ್ಧ 500 ಕೋಟಿ ಗಣಿ ಕಿಕ್‌ಬ್ಯಾಕ್ ಆರೋಪ – ಪ್ರಾಸಿಕ್ಯೂಷನ್ ಕೋರಿ ರಾಜ್ಯಪಾಲರಿಗೆ ಪತ್ರ

Public TV
1 Min Read

ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್, ಮುಡಾ ಸೈಟ್ ಹಗರಣ ವಿವಾದ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗ ಹೊಸದಾಗಿ 500 ಕೋಟಿ ಮೊತ್ತದ ಕಿಕ್‌ಬ್ಯಾಕ್ ಆರೋಪ ಕೇಳಿ ಬಂದಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಪತ್ರ ಬರೆದಿದ್ದಾರೆ.

ಈ ಸಂಬಂಧ ದೂರುದಾರರ ಜೊತೆ ರಾಜ್ಯಪಾಲರು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ದೂರಿನ ಮೇಲೆ ಸಹಿ ಮಾಡಿ ಕಾನೂನು ವಿಭಾಗದ ಅಭಿಪ್ರಾಯಕ್ಕೆ ಕಳಿಸಿದ್ದಾರೆ. ಸಾಲಿಸಿಟರ್ ಜನರಲ್ ಬಳಿ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ತಿಳಿದ್ದಾರೆ. ಅಲ್ಲದೆ, ದಾಖಲೆ ಪರಿಶೀಲಿಸಿ ವರದಿ ನೀಡಲು ಸಾಲಿಸಿಟರ್ ಜನರಲ್‌ಗೆ ತಿಳಿಸಿದ್ದಾರೆ.

ಸಿಎಂ ವಿರುದ್ಧದ ಆರೋಪಗಳೇನು..?
* ಸಿಎಂ ವಿರುದ್ಧ 500 ಕೋಟಿ ಕಿಕ್‌ಬ್ಯಾಕ್ ಆರೋಪ
* ಗಣಿ ಗುತ್ತಿಗೆ ನವೀಕರಣ ಹೆಸರಲ್ಲಿ ಕಿಕ್‌ಬ್ಯಾಕ್ ಆರೋಪ
* 2015ರಲ್ಲಿ 8 ಗಣಿ ಗುತ್ತಿಗೆ ನವೀಕರಣ
* ಹರಾಜು ಮೂಲಕ ಗಣಿ ಹಂಚಿಕೆ ಮಾಡಬೇಕೆಂಬ ಕೇಂದ್ರದ ನೀತಿ ಉಲ್ಲಂಘನೆ
* 2,386 ಎಕರೆ ಭೂಮಿಯನ್ನು 8 ಕಂಪೆನಿಗಳಿಗೆ ಹಂಚಿಕೆ
* ರಾಮಗಡ್ ಮಿನರಲ್ಸ್ ಸೇರಿ 8 ಗಣಿ ಗುತ್ತಿಗೆ ನವೀಕರಣದಲ್ಲಿ ಕಿಕ್‌ಬ್ಯಾಕ್
* ಸಿಬಿಐ ತನಿಖೆ ಎದುರಿಸುತ್ತಿರುವ ರಾಮ್‌ಗಡ ಮಿನರಲ್ಸ್
* ಹರಾಜು ಹಾಕುವ ಬದಲಿಗೆ ನವೀಕರಣ
* ಇದರಿಂದ ಸರ್ಕಾರಕ್ಕೆ 5000 ಕೋಟಿ ನಷ್ಟ

Share This Article