ಮೈಸೂರಿನಲ್ಲಿ ಧಾರಾಕಾರ ಮಳೆ- ಗೋಡೆ ಕುಸಿದು ವ್ಯಕ್ತಿ ಸಾವು

Public TV
1 Min Read

– ಮಂಡ್ಯ ರೈತರ ಮೊಗದಲ್ಲಿ ಸಂತಸ ತಂದ ಮಳೆರಾಯ

ಮೈಸೂರು/ಮಂಡ್ಯ: ಮೈಸೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

40 ವರ್ಷದ ಮಗ್ಗಿ ಮೃತ ದುರ್ದೈವಿ. ಇಲ್ಲಿನ ಗಾಂಧಿನಗರದ ಲಿಡ್ಕರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೈಸೂರಿನಲ್ಲಿ ಸೋಮವಾರ ಸಂಜೆಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಎನ್.ಆರ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಡ್ಯ ನಗರ ಮತ್ತು ಸುತ್ತಮುತ್ತ ರಾತ್ರಿಯೆಲ್ಲ ಮಳೆ ಸುರಿದಿದೆ. ಸೋಮವಾರ ರಾತ್ರಿ ಎಂಟು ಗಂಟೆಗೆ ಆರಂಭವಾದ ಮಳೆ ಅಲ್ಪ ಸ್ವಲ್ಪ ಬಿಡುವಿನೊಂದಿಗೆ ನಿರಂತರವಾಗಿ ಸುರಿಯುತ್ತಿದೆ. ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ ರೈತರ ಭೂಮಿಗೆ ಉತ್ತಮ ನೀರು ಬಂದಿದ್ದು, ಅನ್ನದಾತರ ಮೊಗದಲ್ಲಿ ಹರ್ಷ ತಂದಿದೆ. ಮಳೆಯಿಂದಾಗಿ ಮನೆಯಿಂದ ಹೊರಬರದೇ ಜನ ಮನೆಯಲ್ಲೇ ಉಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *