ಜೀವನ ನಡೆಸಲು ಕೆಲಸವಿಲ್ಲವೆಂದು ವ್ಯಕ್ತಿ ಆತ್ಮಹತ್ಯೆ

Public TV
0 Min Read

ಬೆಂಗಳೂರು: ಜೀವನ ನಡೆಸಲು ಕೆಲಸವಿಲ್ಲವೆಂದು ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯ ನೆಲಮಂಗಲ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆದಿದೆ.

ಮೂಲತಃ ಬಿಸ್ಕೂರು ಗ್ರಾಮದ ನಿವಾಸಿಯಾದ ಮೂರ್ತಿ (38) ನೇಣಿಗೆ ಶರಣಾದ ವ್ಯಕ್ತಿ. ಮೂರ್ತಿ ಅವರು ಗ್ರಾಮವನ್ನ ಬಿಟ್ಟು ನೆಲಮಂಗಲದಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಕೆಲಸವಿಲ್ಲದೆ ಧೃತಿಗೆಟ್ಟು ಪ್ರವಾಸಿ ಮಂದಿರದ ಬಳಿಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೂರ್ತಿ ಶವವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *