– ಕೇಂದ್ರದಿಂದಲೇ ಜಿಎಸ್‌ಟಿ ನೋಟಿಸ್
ಬೆಂಗಳೂರು: ನಮ್ಮ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ತಲಾದಾಯ ಹೆಚ್ಚಾಗಿದೆ. ನಾವೀಗ ದೇಶಕ್ಕೆ ನಂಬರ್ ಒನ್ ಸ್ಥಾನದಲ್ಲಿದ್ದೇವೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Sharana Prakash Patil) ತಿಳಿಸಿದರು.ಇದನ್ನೂ ಓದಿ: ಸಣ್ಣ ವರ್ತಕರಿಗೆ ರಿಲೀಫ್ | ತೆರಿಗೆ ವಸೂಲಿ ಮಾಡಲ್ಲ: ಸಿದ್ದರಾಮಯ್ಯ ಘೋಷಣೆ
ಬೆಂಗಳೂರಿನಲ್ಲಿ ಮಾತಾಡಿದ ಅವರು, 50 ಸಾವಿರ ಕೋಟಿ ರೂ. ಹಣ ನೇರವಾಗಿ ಜನರಿಗೆ ತಲುಪುತ್ತಿದೆ. ಕರ್ನಾಟಕದಲ್ಲಿ ಜನಸ್ನೇಹಿ ಸರ್ಕಾರವಿದೆ. ಜನೋಪಯೋಗಿ ಆರ್ಥಿಕ ನೀತಿಗಳಿಂದ ಸುಧಾರಣೆಯಾಗುತ್ತಿದೆ. ನಮ್ಮ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಭೂ ಸುಧಾರಣಾ ಕಾಯಿದೆ ಸೇರಿದಂತೆ ಒಳ್ಳೊಳ್ಳೆ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಇದು ತಲಾದಾಯ ಹೆಚ್ಚಳಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾಗಿದೆ ಎಂದರು.
ಜಿಎಸ್‌ಟಿ ಕೇಂದ್ರದ ನಿರ್ಧಾರ:
ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿರುವ ನಿರ್ಧಾರ ಕೇಂದ್ರ ಸರ್ಕಾರದ ನಿರ್ಣಯದಂತೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಜಿಎಸ್‌ಟಿ ಮಂಡಳಿ ಮುಖ್ಯಸ್ಥರು, ಹಣಕಾಸು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಇಂಪ್ಲಿಮೆಂಟ್ ಮಾಡಲಾಗುತ್ತದೆ. ಜಿಎಸ್‌ಟಿ ಎಲ್ಲವನ್ನು ಕೇಂದ್ರ ಸರ್ಕಾರ ಕಲೆಕ್ಟ್ ಮಾಡುತ್ತದೆ, ಬಳಿಕ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ನಾವು ಹೇಗೆ ನೋಟಿಸ್ ಕೊಡಲು ಸಾಧ್ಯ? ಎಲ್ಲ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಮಾಡಿದೆ ಎಂದು ವಿವರಿಸಿದರು.ಇದನ್ನೂ ಓದಿ: ಕಲಬುರಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ ಮೃತದೇಹ ಪತ್ತೆ